ಪ್ರಮೋದ್ ಶೆಟ್ಟಿ ಅಭಿನಯದ ವಿಷ್ಣು ವಿ ಪ್ರಸನ್ನ ನಿರ್ದೇಶನದ ‘ಜಲಂಧರ’ ಚಿತ್ರದ ಮತ್ತೊಂದು ಲಿರಿಕಲ್ ಹಾಡು ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.
ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಟ ಶರಣ್ ಹಾಡನ್ನು ರಿಲೀಸ್ ಮಾಡಲಿದ್ದಾರೆ.
ಸ್ಟೆಪಪ್ ಪಿಕ್ಚರ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ರಮೋದ್ ಶೆಟ್ಟಿ ಸೇರಿದಂತೆ ಲೋಕೇಶ್ ಗೌಡ, ರುಶಿಕಾ ರಾಜ್, ಅರೋಹಿತ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜತಿನ್ ದರ್ಶನ್ ಸಂಗೀತ ಸಂಯೋಜನೆ ನೀಡಿದ್ದು, ವೆಂಕಿ udv ಹಾಗೂ ಸತೀಶ್ ಅವರ ಸಂಕಲನ, ಸರಿನ್ ರವೀಂದ್ರನ್, ವಿದ್ಯಾಶಂಕರ್ ಪಿಎಸ್ ಛಾಯಾಗ್ರಹಣ ಮತ್ತು ಶೇಶ್ ರಾವ್ ಅವರ ನೃತ್ಯ ನಿರ್ದೇಶನವಿದೆ