ಗಿರೀಶ್ ಮೂಲಿಮನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಭುವನಂ ಗಗನಂ’ ಚಿತ್ರದ ಮತ್ತೊಂದು ಗೀತೆ ಇದೇ ಜನವರಿ 13ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ‘i got this feeling’ ಎಂಬ ಈ ಹಾಡಿಗೆ ಗುಮ್ಮಿನೇನಿ ವಿಜಯ್ ಧ್ವನಿಯಾಗುವ ಮೂಲಕ ಸಂಗೀತ ಸಂಯೋಜನೆ ನೀಡಿದ್ದಾರೆ. ಅನಿರುದ್ಧ ಶಾಸ್ತ್ರಿ ಅವರ ಸಾಹಿತ್ಯವಿದೆ.
ಈ ಚಿತ್ರದಲ್ಲಿ ಪ್ರಮೋದ್, ಪೃಥ್ವಿ ಅಂಬರ್, ರೇಚೆಲ್ ಡೇವಿಡ್, ಪೊನ್ನು ಅಶ್ವತಿ, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, SVC ಫಿಲಂಸ್ ಬ್ಯಾನರ್ ನಲ್ಲಿ ಎಂ. ಮುನೇಗೌಡ ನಿರ್ಮಾಣ ಮಾಡಿದ್ದಾರೆ. ಸುನೀಲ್ ಕಶ್ಯಪ್ ಸಂಕಲನ, ಉದಯ್ ಲೀಲಾ ಛಾಯಾಗ್ರಹಣ, ಡಾ ಕೆ ರವಿವರ್ಮ, ಥ್ರಿಲ್ಲರ್ ಮಂಜು, ಅರ್ಜುನ್ ರಾಜ್, ನರಸಿಂಹ ಅವರ ಸಾಹಸ ನಿರ್ದೇಶನವಿದೆ.