ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಚಲಿಸುತ್ತಿದ್ದ ಬಸ್ ನಲ್ಲಿ 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.
ಹೈದರಾಬಾದ್ ನಿಂದ ಬೆಂಗಳೂರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಬಾಲಕಿಯ ಮೊಬೈಲ್ ಕಸಿದುಕೊಂಡ ಚಾಲಕ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೇ ಬಾಲಕಿ ಮಲಗಿದ್ದಾಗ ಆಕೆಯ ಸೀಟು ಬಳಿ ಹೋಗಿ ಕಿರುಕುಳ ನೀಡಿದ್ದಾನೆ. ಬಸ್ ಚಾಲಕನ ಬಳಿ ಯುವತಿ ಮೊಬೈಲ್ ಚಾರ್ಜ್ ಗೆ ಹಾಕಿದ್ದಳು. ಕಿಸ್ ಕೊಟ್ಟರೆ ಮೊಬೈಲ್ ಕೊಡುತ್ತೇನೆ ಎಂದು ಬಸ್ ಚಾಲಕ ಆರಿಫ್ ಹೇಳಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಅಣ್ಣನಿಗೆ ಕರೆ ಮಾಡಿ ಬಾಲಕಿ ವಿಷಯ ತಿಳಿಸಿದ್ದಾಳೆ. ಬಸ್ ನಿಂದ ಬಾಲಕಿ ಇಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬಾಲಕಿಯ ಸಹೋದರ ಹಾಗೂ ತಾಯಿ ಬೆಂಗಳೂರಿನ ಚಾಣಕ್ಯ ಸರ್ಕಲ್ ಬಳಿ ಬಸ್ ಚಾಲಕನ ಬಟ್ಟೆ ಬಿಚ್ಚಿಸಿ ಥಳಿಸಿದ್ದಾರೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಘಟನೆಯನ್ನು ತಡೆದು ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.