ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್: ಬಸ್, ಮೆಟ್ರೋ ರೈಲು ಬಳಿಕ ಆಟೋ ಪ್ರಯಾಣ ದರವೂ ಹೆಚ್ಚಳ

ಬೆಂಗಳೂರು: ಬಸ್, ಮೆಟ್ರೋ ರೈಲು ಪ್ರಯಾಣದರ ಏರಿಕೆಯ ನಂತರ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಆಗಸ್ಟ್ 1ರಿಂದ ಅನ್ವಯವಾಗುವಂತೆ ಹೆಚ್ಚಳವಾಗಲಿದೆ. ಮೊದಲ ಎರಡು ಕಿಲೋ ಮೀಟರ್ ಗೆ ಇದ್ದ ಕನಿಷ್ಠ ದರ 30 ರೂಪಾಯಿಯನ್ನು 36 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ನಂತರದ ಪ್ರತಿ ಕಿಲೋ ಮೀಟರ್ ದೂರವನ್ನು 15 ರೂ.ನಿಂದ 18 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.

ಆಗಸ್ಟ್ 1 ರಿಂದ ಅನ್ವಯವಾಗುವಂತೆ ಆಟೋ ಪ್ರಯಾಣ ದರ ಹೆಚ್ಚಳ ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ನಗರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಕಾಯುವಿಕೆ ದರವನ್ನು ಮೊದಲ ಐದು ನಿಮಿಷಕ್ಕೆ ಉಚಿತ, ಐದು ನಿಮಿಷದ ನಂತರದ ಪ್ರತಿ 15 ನಿಮಿಷದ ದರವನ್ನು 5 ರೂ.ನಿಂದ 10 ರೂ.ಗೆ ಹೆಚ್ಚಳ ಮಾಡಲಾಗಿದೆ.

ಪ್ರಯಾಣಿಕರು 20 ಕೆಜಿ ಲಗೇಜ್ ಉಚಿತವಾಗಿ ತೆಗೆದುಕೊಂಡು ಹೋಗಬಹುದು. 20 ರಿಂದ 50 ಕೆಜಿಗೆ ಪ್ರತಿ ಕೆಜಿ ಲಗೇಜಿಗೆ 10 ರೂ. ನಂತೆ ಪಾವತಿಸಬೇಕು.

ಪರಿಷ್ಕೃತ ದರದ ಮೂಲ ಪಟ್ಟಿಯ ಪ್ರತಿಯನ್ನು ಎಲ್ಲಾ ಆಟೋಗಳಲ್ಲಿ ಪ್ರದರ್ಶಿಸಬೇಕು ಅಕ್ಟೋಬರ್ 10ರೊಳಗೆ ಮೀಟರ್ ಅನ್ನು ಪರಿಷ್ಕೃತ ದರಕ್ಕೆ ನಿಗದಿ ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read