SHOCKING : ರಾಜ್ಯದಲ್ಲಿ ಹಾಡಹಗಲೇ ಮತ್ತೊಂದು ದರೋಡೆ : ಸ್ಕೂಟರ್ ಡಿಕ್ಕಿಯಿಂದ ಬರೋಬ್ಬರಿ 13 ಲಕ್ಷ ಎಗರಿಸಿದ ಖದೀಮರು.!

ಹಾಸನ : ರಾಜ್ಯದಲ್ಲಿ ಹಾಡಹಗಲೇ ಮತ್ತೊಂದು ದರೋಡೆ ನಡೆದಿದ್ದು, ಸ್ಕೂಟರ್ ಡಿಕ್ಕಿಯಿಂದ 13 ಲಕ್ಷ ರೂ. ಹಣ ಖದೀಮರು ದೋಚಿರುವ ಘಟನೆ ಸಕಲೇಶಪುರ ಪಟ್ಟಣದ ಬಿ.ಎಂ ರಸ್ತೆಯಲ್ಲಿ ನಡೆದಿದೆ.

ಕುಡುಗರಹಳ್ಳಿ ಗ್ರಾಮದ ಯೋಗೇಶ್ ಎಂಬುವವರು ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಯೋಗೇಶ್ ಅವರು ಎಮರ್ಜನ್ಸಿ ಕಾರಣಕ್ಕೆ ಮನೆಯಲ್ಲಿದ್ದ ಚಿನ್ನಾಭರಣವನ್ನು ನಗರದ ಬ್ಯಾಂಕ್ ಆಫ್ ಬರೋಡದಲ್ಲಿ ಗಿರವಿ ಇಟ್ಟು 13 ಲಕ್ಷ ರೂ. ಸಾಲ ಪಡೆದಿದ್ದರು.

ಹೆಚ್ಚುವರಿ 2.5 ಲಕ್ಷ ರೂ. ಹಣ ಬೇಕಾಗಿದ್ದರಿಂ ಹಣ ಡ್ರಾ ಮಾಡಲು ಕೆನರಾ ಬ್ಯಾಂಕ್ ಶಾಖೆಗೆ ಬಂದಿದ್ದರು. ಬ್ಯಾಂಕ್ಒಳಗೆ ಹೋಗುವ ಮುನ್ನ 13 ಲಕ್ಷ ರೂ. ಹಣವನ್ನು ಸ್ಕೂಟರ್ನ ಡಿಕ್ಕಿಯಲ್ಲಿ ಇಟ್ಟು, ಲಾಕ್ ಮಾಡಿ ಹೋಗಿದ್ದರು. ಬ್ಯಾಂಕ್ನೊಳಗೆ ಹೋಗಿ ಬರುವಷ್ಟರಲ್ಲಿ ಕಳ್ಳರು ಡಿಕ್ಕಿ ಲಾಕ್ ಮುರಿದು ಹಣ ದೋಚಿ ಎಸ್ಕೇಪ್ ಆಗಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read