‌ʼಸ್ಟಾರ್ಟಪ್‌ʼ ಆರಂಭಿಸಲು ನಿಧಿ ಸಂಗ್ರಹಕ್ಕೆ ಮುಂದಾದ ಆಟೋ ಚಾಲಕ; ಫೋಟೋ ವೈರಲ್

ಸ್ವಂತ ಉದ್ಯಮ ಸ್ಥಾಪಿಸಲು ಬಯಸಿರುವ ಬೆಂಗಳೂರಿನ ಪದವೀಧರ ಆಟೋ ಚಾಲಕರೊಬ್ಬರು ಇದಕ್ಕಾಗಿ ನಿಧಿ ಸಂಗ್ರಹಕ್ಕೆ ಮುಂದಾಗಿದ್ದು, ತಮ್ಮ ಸೀಟಿನ ಹಿಂಬದಿ ಈ ಕುರಿತ ಪ್ರಕಟಣೆ ಅಂಟಿಸಿದ್ದಾರೆ. ಇದರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಭಾರತದ ಸ್ಟಾರ್ಟ್‌ಅಪ್ ಹಬ್ ಎಂದು ಕರೆಯಲ್ಪಡುವ ಬೆಂಗಳೂರು, ಉದ್ಯಮ ಆರಂಭಿಸಲು ಬಯಸುವವರಿಗೆ ಅಚ್ಚುಮೆಚ್ಚಿನ ತಾಣ. ಇತ್ತೀಚೆಗಷ್ಟೇ ಎಲ್ಲರ ಗಮನ ಸೆಳೆದಿರುವುದು ಸ್ಯಾಮ್ಯುಯೆಲ್ ಕ್ರಿಸ್ಟಿ. ಪದವಿ ಹೊಂದಿರುವ ಆಟೋ ರಿಕ್ಷಾ ಚಾಲಕ ತಮ್ಮ ಸ್ಟಾರ್ಟಪ್‌ ಆರಂಭಕ್ಕೆ ಅನುಸರಿಸಿರುವ ನವೀನ ವಿಧಾನ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ರೆಡ್ಡಿಟ್ ಬಳಕೆದಾರರೊಬ್ಬರು ಇತ್ತೀಚೆಗೆ ಕ್ರಿಸ್ಟಿಯ ಆಟೋದಲ್ಲಿ ಪ್ರದರ್ಶಿಸಲಾದ ಪೋಸ್ಟರ್‌ ಫೋಟೋವನ್ನು ಹಂಚಿಕೊಂಡಿದ್ದು ಇದರಲ್ಲಿ “ಹಾಯ್ ಪ್ರಯಾಣಿಕರೇ, ನನ್ನ ಹೆಸರು ಸ್ಯಾಮ್ಯುಯೆಲ್ ಕ್ರಿಸ್ಟಿ. ನಾನು ಪದವೀಧರನಾಗಿದ್ದು, ನನ್ನ ಆರಂಭಿಕ ವ್ಯವಹಾರ ಕಲ್ಪನೆಗಾಗಿ ಹಣವನ್ನು ಸಂಗ್ರಹಿಸಲು ನೋಡುತ್ತಿದ್ದೇನೆ. ನಿಮಗೆ ಆಸಕ್ತಿ ಇದ್ದರೆ, ದಯವಿಟ್ಟು ನನ್ನೊಂದಿಗೆ ಮಾತನಾಡಿ” ಎಂದು ಬರೆದಿರುವುದನ್ನು ಕಾಣಬಹುದು.

ನಿಧಿಸಂಗ್ರಹಣೆಗೆ ಆಟೋ-ರಿಕ್ಷಾ ಚಾಲಕರ ಸೃಜನಾತ್ಮಕ ವಿಧಾನವು ರೆಡ್ಡಿಟ್‌ನಲ್ಲಿ ವೈವಿಧ್ಯಮಯ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ, ಇಂತಹ ನವೀನ ಪ್ರಯತ್ನಗಳ ಬಗ್ಗೆ ಹಲವರು ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ, ಮತ್ತೊಬ್ಬ ಬೆಂಗಳೂರಿನ ಆಟೋರಿಕ್ಷಾ ಚಾಲಕರೊಬ್ಬರು ಪ್ರಯಾಣಿಕರಿಗೆ ಅಲ್ಪ ಪ್ರಯಾಣದ ಅವಧಿಯಲ್ಲಿ ಕನ್ನಡ ಕಲಿಯುವ ಮಹತ್ವದ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದು, ಇದು ಕೂಡಾ ವೈರಲ್‌ ಆಗಿತ್ತು.

ಆಟೋ-ರಿಕ್ಷಾ ಚಾಲಕರ ನಿಧಿ ಸಂಗ್ರಹದ ಪಿಚ್

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read