ಬೆಂಗಳೂರು : ಬೆಂಗಳೂರಲ್ಲಿ ಕೊಲೆ, ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು, ಜನರ ನೆಮ್ಮದಿಕೆಡಿಸಿದೆ.
ಪತಿಯೇ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ವಾಬಸಂದ್ರ ಬಳಿ ನಡೆದಿದೆ. ಪ್ರಿಯದರ್ಶಿನಿ (21) ಎಂಬ ಮಹಿಳೆಯನ್ನು ಪತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
1 ವಾರದ ಹಿಂದೆ ದಂಪತಿಗಳು ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು. ಇವರಿಗೆ ಒಂದು ಮಗು ಕೂಡ ಇತ್ತು. ಹೆಂಡತಿಯನ್ನು ಕೊಂದ ಗಂಡ ಎಸ್ಕೇಪ್ ಆಗಿದ್ದನು. ಮಗು ಅಳುತ್ತಿದ್ದ ಶಬ್ದ ಕೇಳಿ ಮನೆಯೊಳಗೆ ಬಂದ ಮನೆ ಮಾಲೀಕಿ ಕೊಲೆ ನಡೆದಿದ್ದನ್ನು ಕಂಡು ಬೆಚ್ಚಿಬಿದ್ದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
TAGGED:ಬೆಂಗಳೂರಲ್ಲಿ ಮತ್ತೊಂದು ಮರ್ಡರ್