ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಮರ್ಡರ್ ನಡೆದಿದ್ದು, ಯುವಕನನ್ನು ಕಿಡ್ನ್ಯಾಪ್ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ನೀರುಗುಂಟೆಪಾಳ್ಯದಲ್ಲಿ ಈ ಘಟನೆ ನಡೆದಿದೆ.
ಪ್ರೀತಂ (19) ಎಂಬ ಯುವಕನನ್ನು ಕೊಲೆ ಮಾಡಲಾಗಿದೆ. ಪ್ರೀತಂ ತನಗಿಂತ 2 ವರ್ಷ ದೊಡ್ಡವಳಾದ ಯುವತಿಯನ್ನು ಪ್ರೀತಿಸುತ್ತಿದ್ದರು. ಯುವಕ ಡೆಲಿವರಿ ಬಾಯ್ ಆಗಿದ್ದನು. ಹುಡುಗಿ ಎಂಬಿಬಿಎಸ್ ಮಾಡುತ್ತಿದ್ದಳು.
ಪ್ರೀತಿ ವಿಚಾರ ಇಳಿದು ಯುವತಿ ಸಂಬಂಧಿಕರು ಪ್ರೀತಂಗೆ ವಾರ್ನ್ ಮಾಡಿದ್ದರು.
ವಾರ್ನಿಂಗ್ ಮಾಡಿದ್ರೂ ಪ್ರೀತಂ ಪ್ರೀತಿ ಮುಂದುವರೆಸಿದ್ದನು. ಇದರಿಂದ ರೊಚ್ಚಿಗೆದ್ದ ಯುವತಿ ಸಂಬಂಧಿಕರು ಯುವಕನನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
TAGGED:ಮರ್ಡರ್