ಬಾಗಲಕೋಟೆ : ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಕ್ಯಾಂಟರ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಮೂವರು ಬಾಲಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಾಗಲಕೋಟೆಯ ಸೀಮಿಕೇರಿ ಬೈಪಾಸ್ ನಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆ ನಡೆದ ಸ್ಥಳಕ್ಕೆ ಕಲಾದಗಿ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬಾಲಕರು ಗದ್ದನಕೆರೆ ಕ್ರಾಸ್ ನಿಂದ ಹುಬ್ಬಳ್ಳಿ ಮಾರ್ಗವಾಗಿ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕ್ಯಾಂಟರ್ ಬೈಕ್ ಗೆ ಡಿಕ್ಕಿಯಾಗಿದೆ.
ಮೃತರನ್ನು ಸಿದ್ದು ರಾಜು ಗಣಿ (16), ಸಂತೋಷ ಕೂಡಗಿ (16) ಮತ್ತು ಕಾಮಣ್ಣ ಕುಪಲಿ (16) ಎಂದು ಗುರುತಿಸಲಾಗಿದೆ. ಊರಲ್ಲಿ ಹನುಮ ಜಯಂತಿ ಪ್ರಯುಲ್ತ ಡಿಜೆ ಮೆರವಣಿಗೆ ಆಯೋಜಿಸಲಾಗಿತ್ತು. ಡಿಜೆ ಮೆರವಣಿಗೆ ನೋಡಲು ಮೂವರು ಬಾಲಕರು ಬೈಕ್ನಲ್ಲಿ ತೆರಳಿದ್ದರು.
You Might Also Like
TAGGED:ಭೀಕರ ಅಪಘಾತ