ರೈತರಿಗೆ ಕೃಷಿ ಇಲಾಖೆಯಿಂದ ಮತ್ತೊಂದು ಗುಡ್ ನ್ಯೂಸ್

2025-26ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯ ಯೋಜನೆಯಡಿಯಲ್ಲಿ ತುಂತುರು ನೀರಾವರಿ ಘಟಕಗಳಿಗೆ ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.

  ಸೂಕ್ಷ್ಮ ನೀರಾವರಿ ಘಟಕವನ್ನು ಪ್ರಾರಂಭಿಸಲು ಸಹಾಯಧನ ಪಡೆಯಲು ಎಲ್ಲಾ ವರ್ಗದ ರೈತರಿಗೆ ಪ್ರತಿ 7 ವರ್ಷಕ್ಕೊಮ್ಮೆ ಮಾತ್ರ ಅವಕಾಶವಿರುತ್ತದೆ. ರೈತರು ಹೊಂದಿರುವ ಹಿಡುವಳಿಗನುಗುಣವಾಗಿ ಗರಿಷ್ಠ 5 ಹೆಕ್ಟರ್‌ವರೆಗೆ ಸಹಾಯಧನ ಮಂಜೂರು ಮಾಡಲು ಅವಕಾಶವಿರುತ್ತದೆ. ಅಂದರೆ ರೈತರಿಗೆ 3 ಹೆಕ್ಟರ್ ಹಿಡುವಳಿಯಿದ್ದಲ್ಲಿ ಈಗಾಗಲೇ 1 ಹೆಕ್ಟರ್‌ಗೆ ಸಹಾಯಧನ ಮಂಜೂರು ಮಾಡಿರುವ, ಇನ್ನೂ ಬಾಕಿ 1 ಹೆಕ್ಟರ್‌ಗೆ ಶೇ.90ರ ಸಹಾಯಧನ ಮತ್ತು ಉಳಿಕೆ ಮತ್ತೊಂದು ಹೆಕ್ಟರ್‌ಗೆ ಶೇ.45ರ ಸಹಾಯಧನ ಮಂಜೂರು ಮಾಡಲು ಅವಕಾಶವಿರುತ್ತದೆ.

   ಕೊಪ್ಪಳ ತಾಲೂಕಿನ ರೈತ ಭಾಂದವರು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಅರ್ಜಿ ನಮೂನೆ, ಆಧಾರ ಕಾರ್ಡ, ಪಾಸ್ ಪೋರ್ಟ್ ಸೈಜ್ ಪೋಟೋ, ನೀರಾವರಿ ಪ್ರಮಾಣ ಪತ್ರ, ಪಹಣಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇದ್ದಲ್ಲಿ ಪ್ರಮಾಣ ಪತ್ರ, ನೋಟ್ರಿಯೊಂದಿಗೆ ರೂ. 20 ಛಾಪಕಾಗದ (ಬಾಂಡ್), ಬ್ಯಾಂಕ ಪಾಸ್ ಬುಕ್ ಹಾಗೂ ಆರ್.ಟಿ.ಜಿ.ಎಸ್. ಪತ್ರದೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಪ್ರಧಾನ ಮಂತ್ರಿ ಕೃಷಿ ಸಿಂಚಾಯ ಯೋಜನೆಯ ಸದಪಯೋಗ ಪಡೆದುಕೊಳ್ಳಬೇಕು.

  ರೈತರು ಕಡ್ಡಾಯವಾಗಿ ಎಫ್‌ಐಡಿ ಯನ್ನು ಹೊಂದಿರಬೇಕಾಗಿದ್ದು, ರೈತರು ಈಗಾಗಲೇ ಎಫ್‌ಐಡಿ ಯನ್ನು ಹೊಂದಿದ್ದಲ್ಲಿ ಅಥವಾ ಹೊಂದಿರದೆ ಇದ್ದಲ್ಲಿ ತಮ್ಮ ಎಲ್ಲಾ ಪಹಣಿಗಳನ್ನು ಎಫ್‌ಐಡಿ.ಗೆ ಜೋಡಣೆ ಮಾಡಿಕೊಳ್ಳಬೇಕು ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read