ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್ : `ಸಾರವರ್ಧಿತ’ ಅಕ್ಕಿ ವಿತರಣೆ

ಮಡಿಕೇರಿ : ಭಾರತ ಆಹಾರ ನಿಗಮದಲ್ಲಿ ಲಭ್ಯತೆಯನುಸಾರ ಜುಲೈ-2023 ರ ಮಾಹೆಗೆ ಸಾರ್ವಜನಿಕ ವಿತರಣಾ ಪದ್ಧತಿಯಡಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಚೀಟಿದಾರರಿಗೆ ‘ಸಾರವರ್ಧಿತ’ (ಪೌಷ್ಟಿಕಾಂಶ) ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದ್ದು, ಸಾರ್ವಜನಿಕ ಪಡಿತರದಾರರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ ಸಾರವರ್ಧಿತ ಅಕ್ಕಿಯನ್ನು ಪಡೆದು ಸದುಪಯೋಗಿಸಿಕೊಳ್ಳಬೇಕೆಂದು ಸಾರ್ವಜನಿಕ ಪಡಿತರದಾರರಲ್ಲಿ ಆಹಾರ ಇಲಾಖೆ ಕೋರಿದೆ.

ಅಂತ್ಯೋದಯ ಪಡಿತರ ಚೀಟಿಗಳಿಗೆ (ಎಎವೈ) ಪ್ರತಿ ಪಡಿತರ ಚೀಟಿಗೆ ಅಕ್ಕಿ- 35 ಕೆ.ಜಿ ಉಚಿತ, ಪಿಹೆಚ್‍ಹೆಚ್ ಪಡಿತರ ಚೀಟಿಗಳಿಗೆ (ಬಿಪಿಎಲ್) (ಆದ್ಯತಾ) ಪ್ರತಿ ಸದಸ್ಯರಿಗೆ ಅಕ್ಕಿ-05 ಕೆ.ಜಿ. ಉಚಿತ, ಎನ್‍ಪಿಹೆಚ್‍ಹೆಚ್ ಪಡಿತರ ಚೀಟಿಗಳಿಗೆ (ಎಪಿಎಲ್)(ಒಪ್ಪಿತ ಪಡಿತರ ಚೀಟಿಗಳಿಗೆ) ಏಕ ಸದಸ್ಯ ಪಡಿತರ ಚೀಟಿಗೆ ಅಕ್ಕಿ-05 ಕೆ.ಜಿ,

2 ಮತ್ತು ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗೆ ಅಕ್ಕಿ-10 ಕೆ.ಜಿ. ಪ್ರತಿ ಕೆ.ಜಿ.ಗೆ ರೂ.15/-, ಅಂತರ್ ನ್ಯಾಯಬೆಲೆ ಅಂಗಡಿ / ಅಂತರ್ ಜಿಲ್ಲೆ /ಅಂತರ್ ರಾಜ್ಯ ಪಡಿತರ ಚೀಟಿಗಳಿಗೆ ಪೋರ್ಟಬಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ವರ್ಗದ ಪಡಿತರ ಚೀಟಿಗೆ ಜಿಲ್ಲೆಯ/ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ಇಲಾಖೆ ಪ್ರಕಟಣೆ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read