ಬೆಂಗಳೂರು: ಈ ಬಾರಿ ವಾಡಿಕೆಗಿಂತ ಮೊದಲೇ ಮುಂಗಾರು ಆಗಮನವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಹಂಗಾಮಿಗೆ ರೈತರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಬಿತ್ತನೆ ಬೀಜಗಳ ದರದಲ್ಲಿ ಶೇಕಡ 40ರಷ್ಟರವರೆಗೆ ಹೇಳಿಕೆಯಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಬರದ ಕಾರಣಕ್ಕೆ ಬಿತ್ತನೆ ಬೀಜಗಳ ಉತ್ಪಾದನೆ ಕುಂಠಿತವಾಗಿ ಬೆಲೆಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದವು. ಇದರಿಂದ ರೈತರಿಗೆ ಬೆಲೆ ಏರಿಕೆ ಬಿಸಿ ತಟ್ಟಿತ್ತು. ಈ ಬಾರಿ ಗಣನೀಯವಾಗಿ ಬಿತ್ತನೆ ಬೀಜಗಳ ದರ ಇಳಿಕೆಯಾಗಿದೆ
ಕೆಜಿಗೆ ಬಿತ್ತನೆ ಬೀಜಗಳ ದರ ಹೀಗಿದೆ. ಹೆಸರು ಕಾಳು 186 ರೂ ನಿಂದ 140 ರೂ. ಗೆ ಇಳಿಕೆಯಾಗಿದೆ. ಕಡಲೆ ಬೀಜ 102 ರೂ.ನಿಂದ 99.50 ರೂ.ಗೆ ಇಳಿಕೆಯಾಗಿದೆ. ಸಿರಿಧಾನ್ಯಗಳು 117 ರೂ.ನಿಂದ 69.50 ರೂ., ತೊಗರಿ 178.50 ರೂ.ನಿಂದ 142.50 ರೂ., ಸೂರ್ಯಕಾಂತಿ 842.81 ರೂ.ನಿಂದ 770 ರೂ., ಸೋಯಾಬಿನ್ 77.47 ರೂ.ನಿಂದ 75.72 ರೂ., ಉದ್ದಿನಕಾಳು 157 ರೂ.ನಿಂದ 138.50 ರೂ., ಬಟಾಣಿ 135 ರೂ ನಿಂದ 130 ರೂ.ಗೆ ಇಳಿಕೆಯಾಗಿದೆ
ನವಣೆ, ಊದಲು ದರ ಕೆಜಿಗೆ 117 ರೂ.ನಿಂದ 69.60 ರೂ.ಗೆ ಇಳಿಕೆಯಾಗಿದೆ. ನಾನಾ ವಿಧದ ಭತ್ತದ ತಳಿಗಳ ದರ ಕಳೆದ ವರ್ಷ ಕೆ.ಜಿಗೆ 40 ರಿಂದ 45 ರೂ.ವರೆಗೆ ಇತ್ತು. ಈ ಬಾರಿ 40 ರೂ.ನಿಂದ ಗರಿಷ್ಠ 49 ರೂಪಾಯಿವರೆಗೆ ಇದೆ.