BREAKING : ರಾಜ್ಯದಲ್ಲಿ ಮತ್ತೊಂದು ‘ಡಬಲ್ ಮರ್ಡರ್’ :  ಪ್ರೇಮಿಗಳಿಗೆ ಸಹಕರಿಸಿದ್ದಕ್ಕೆ ಶಿವಮೊಗ್ಗದಲ್ಲಿ ಇಬ್ಬರ ಹತ್ಯೆ.!

ಶಿವಮೊಗ್ಗ : ರಾಜ್ಯದಲ್ಲಿ ಮತ್ತೊಂದು ಡಬಲ್ ಮರ್ಡರ್ ನಡೆದಿದ್ದು, ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜೈ ಭೀಮ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.

ಪ್ರೇಮಿಗಳಿಗೆ ಸಹಕರಿಸಿದ ಇಬ್ಬರನ್ನ ಯುವತಿಯ ಸಹೋದರ ಹಾಗೂ ಹಾಗೂ ಆತನ ಸ್ನೇಹಿತರು ಹತ್ಯೆ ಮಾಡಿದ್ದಾರೆ.

ಹತ್ಯೆಯಾದ ಯುವಕರನ್ನ ಕಿರಣ್ (25) ಮಂಜುನಾಥ್ (45) ಎಂದು ಗುರುತಿಸಲಾಗಿದೆ. ಮನೆ ಬಿಟ್ಟು ಬಂದ ಪ್ರೇಮಿಗಳು ಶುಕ್ರವಾರ ಸಂಜೆ ಹಳೆ ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಹುಡುಗನ ಸ್ನೇಹಿತರ ಮೇಲೆ ಯುವತಿಯ ಸಹೋದರ ಹಾಗೂ ಆತನ ಸ್ನೇಹಿತರು ದಾಳಿ ಮಾಡಿದ್ದಾರೆ. ಚಾಕುವಿನಿಂದ ಇರಿದು ಇಬ್ಬರನ್ನ ಹತ್ಯೆ ಮಾಡಿದ್ದಾರೆ. ಓಡಿ ಹೋದ ಹುಡುಗ-ಹುಡುಗಿಗೆ ಇಬ್ಬರು ಬೆಂಬಲ ನೀಡಿದ್ದಾರೆಂದು ದಾಳಿ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಐವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read