ಧರ್ಮಸ್ಥಳ ಬುರುಡೆ ಕೇಸ್ ಗೆ ಮತ್ತೊಂದು ಮೆಗಾ ಟ್ವಿಸ್ಟ್ ಸಿಕ್ಕಿದೆ. ಸೌಜನ್ಯ ಮಾವ ವಿಠಲಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಬಂಗ್ಲೆ ಗುಡ್ಡ ಕಾಡಿನಲ್ಲಿ ಹೆಣಗಳ ರಾಶಿಗೆ ಸಿಕ್ಕಿದೆ. ಮಹಜರಿಗೆ ಕರೆದೊಯ್ದ ವೇಳೆಯಲ್ಲಿ ಎಂಟು ಕಳೆಬರ ಕಂಡು ಬಂದಿವೆ. ಮಗುವಿನ ಎಲುಬುಗಳು ನನ್ನ ಕಣ್ಣಿಗೆ ಬಿದ್ದಿವೆ ಎಂದು ವಿಠಲ ಗೌಡ ಸ್ಪೋಟಕ ಆರೋಪ ಮಾಡಿದ್ದಾರೆ.
ಸೆಪ್ಟೆಂಬರ್ 6 ಮತ್ತು 10 ರಂದು ಎಸ್ಐಟಿ ಸ್ಥಳ ಪರಿಶೀಲನೆ ನಡೆಸಿದ್ದು, ಸೆಪ್ಟೆಂಬರ್ 6ರಂದು ಮೂರು ಮನುಷ್ಯರ ಕಳೆಬರ ಕಂಡುಬಂದಿದೆ. ಸೆ.10ರಂದು 5 ಹೆಣಗಳು ಗೋಚರಿಸಿವೆ ಎಂದು ವಿಠಲ ಗೌಡ ಹೇಳಿಕೆ ನೀಡಿರುವುದು ಸಂಚಲನ ಮೂಡಿಸಿದೆ. ಎಸ್ಐಟಿ ವಿಚಾರಣೆ ಬಳಿಕವೂ ವಿಠಲಗೌಡ ಈ ಬಗ್ಗೆ ಹೇಳಿಕೆ ನೀಡಿರುವುದು ಹಲವು ಪ್ರಶ್ನೆ, ಅನುಮಾನ ಹುಟ್ಟು ಹಾಕಿದೆ.