ಹುಬ್ಬಳ್ಳಿ: ಅನ್ನಭಾಗ್ಯ ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕಿಂಗ್ ಪಿನ್ ಸಚಿನ್ ಕಬ್ಬೂರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಹುಬ್ಬಳ್ಳಿ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಅಕ್ರಮಾವಾಗಿ ಸಾಗಿಸುತ್ತಿದ್ದ 49 ಟನ್ ಅನಭಾಗ್ಯ ಅಕ್ಕಿ ಸೀಜ್ ಮಾಡಲಾಗಿತ್ತು. ಎರಡು ಲಾರಿ ಸೇರಿ ಹಲವು ವಾಹನ, 9 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಅಕ್ರಮದ ಕಿಂಗ್ ಪಿನ್ ಸಚಿನ್ ಕಬ್ಬೂರ್ ತಲೆಮರೆಸಿಕೊಂಡಿದ್ದ. ಈತ ಮೂಲತಃ ಹಾವೇರಿ ಜಿಲ್ಲೆಯವನು. ದೊಡ್ಡ ಅಪರಾಧ ಪ್ರಕರಣಗಳಲ್ಲಿಯೂ ಈತ ಭಾಗಿಯಾಗಿದ್ದಾನೆ. ಆತನ ಲೊಕೇಶನ್ ಭಾರತದಲ್ಲಿಯೇ ಕಂಡುಬರುತ್ತಿತ್ತು. ಆದರೆ ಆತ ದುಬೈನಲ್ಲಿ ವಾಸವಾಗಿದ್ದ. ಸದ್ಯ ಸಚಿನ್ ಕಬ್ಬೂರ್ ನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.