ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್ ಪೂಜಾರಿ ವೇಣೂರ್ ಕಥೆ ಬರೆದು ನಿರ್ದೇಶಿಸಿರುವ ‘ದಸ್ಕತ್’ ಎಂಬ ತುಳು ಚಿತ್ರ ನಾಳೆ ಬಿಡುಗಡೆಗೆ ಸಿದ್ಧವಾಗಿದೆ. ಮೊದಲ ದಿನ ಕೇವಲ 99 ರೂ. ಗಳಿಗೆ ಟಿಕೆಟ್ ದೊರೆಯಲಿದೆ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಈ ಚಿತ್ರವನ್ನು 77 ಸ್ಟುಡಿಯೋಸ್ ಬ್ಯಾನರ್ ನಲ್ಲಿ ರಾಘವೇಂದ್ರ ಕುಡ್ವಾ ನಿರ್ಮಾಣ ಮಾಡಿದ್ದು, ದೀಕ್ಷಿತ್ ಕೆ ಅಂಡಿಂಜೆ ಸೇರಿದಂತೆ ಮೋಹನ್ ಶೇಣಿ, ನೀರಜ್ ಕುಂಜರ್ಪ, ಯೋಗೀಶ್ ಶೆಟ್ಟಿ ಮಿಥುನ್ ರಾಜ್, ಯುವ ಶೆಟ್ಟಿ, ಭವ್ಯ ಪೂಜಾರಿ, ಚಂದ್ರಹಾಸ ಉಳ್ಳಾಲ್ ಬಣ್ಣ ಹಚ್ಚಿದ್ದಾರೆ. ಗಣೇಶ್ ನೀರ್ಚಾಲ್ ಸಂಕಲನ, ಹಾಗೂ ಸಂತೋಷ್ ಆಚಾರ್ಯ ಗುಂಪಾಲಾಜೆ ಛಾಯಾಗ್ರಹಣವಿದೆ. ಇನ್ನುಳಿದಂತೆ ಸಮರ್ಥನ್ ಎಸ್ ರಾವ್ ಸಂಗೀತ ಸಂಯೋಜನೆ ನೀಡಿದ್ದಾರೆ.