ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಧಾರವಾಡ: ಶಿಶು ಅಭಿವೃದ್ಧಿ ಯೋಜನೆಯಡಿ ಕಲಘಟಗಿ ತಾಲೂಕಿನ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಯ ಭರ್ತಿಗಾಗಿ ಭೌತಿಕವಾಗಿ ಆಫ್‍ಲೈನ್ ಮೂಲಕ ಸ್ಥಳೀಯ ಅರ್ಹ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿಗದಿತ ಅರ್ಜಿ ನಮೂನೆಗಳನ್ನು ಮಾ. 20 ಏಪ್ರೀಲ್ 18 ರೊಳಗಾಗಿ ಸಲ್ಲಿಸಬೇಕು. ಅರ್ಜಿಯ ಲಕೋಟೆಯ ಮೇಲೆ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಎಂದು ನಮೂದಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಕಲಘಟಗಿ ತಾಲೂಕಾ ಯೋಜನಾ ಕಛೇರಿಯಲ್ಲಿ ಇಟ್ಟಿರುವ ಅರ್ಜಿ ಪೆಟ್ಟಿಗೆಯಲ್ಲಿ ಹಾಕಬೇಕು.

ಖಾಲಿ ಹುದ್ದೆಗಳ ವಿವರ ಮತ್ತು ನೇಮಕಾತಿಗಳ ಷರತ್ತುಗಳ ಕುರಿತು ಶಿಶು ಅಭಿವೃದ್ಧಿ ಯೋಜನೆಯ ನೋಟೀಸ ಬೋರ್ಡಿಗೆ ಹಾಗೂ ಅಂಗನವಾಡಿ ಕೇಂದ್ರಗಳ ನೋಟೀಸ್ ಬೋರ್ಡಿಗೆ ಮತ್ತು ಕಲಘಟಗಿ ತಹಶೀಲ್ದಾರ ಕಛೇರಿ, ಕಲಘಟಗಿ ತಾಲೂಕ ಪಂಚಾಯತ್ ಕಚೇರಿಯ ನಾಮಪಲಕದಲ್ಲಿ ಅಳವಡಿಸಿದ್ದು ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನೆ ಕಚೇರಿ, ಕಲಘಟಗಿ ಕಾರ್ಯಾಲಯವನ್ನು (ಕಛೇರಿ ದೂರವಾಣಿ ಸಂಖ್ಯೆ 08370-284532) ಸಂಪರ್ಕಿಸಬಹುದು ಮತ್ತು ಅರ್ಜಿ ನಮೂನೆಯನ್ನು ಕಛೇರಿಯಿಂದ ಪಡೆಯಬಹುದು ಎಂದು ಕಲಘಟಗಿ ತಾಲೂಕಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ತಾಲೂಕಿನ ಹುದ್ದೆಗಳು

ಶಿಶು ಅಭಿವೃದ್ಧಿ ಯೋಜನೆಯಡಿ ಹುಬ್ಬಳ್ಳಿ-ಧಾರವಾಡ(ಶಹರ) ತಾಲೂಕಿನ ವ್ಯಾಪ್ತಿಯಲ್ಲಿ ಬರುವ, ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆಯ ಭರ್ತಿಗಾಗಿ ಭೌತಿಕವಾಗಿ ಆಫ್‍ಲೈನ್ ಮೂಲಕ ಸ್ಥಳೀಯ ಅರ್ಹ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿಗದಿತ ಅರ್ಜಿ ನಮೂನೆಗಳನ್ನು ಮಾ. 20 ಏಪ್ರೀಲ್ 18 ರೊಳಗಾಗಿ ಸಲ್ಲಿಸಬೇಕು. ಅರ್ಜಿಯ ಲಕೋಟೆಯ ಮೇಲೆ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಎಂದು ನಮೂದಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಹುಬ್ಬಳ್ಳಿ-ಧಾರವಾಡ (ಶಹರ) ಯೋಜನಾ ಕಛೇರಿಯಲ್ಲಿ ಇಟ್ಟಿರುವ ಅರ್ಜಿ ಪೆಟ್ಟಿಗೆಯಲ್ಲಿ ಹಾಕಬೇಕು.

ಖಾಲಿ ಹುದ್ದೆಗಳ ವಿವರ ಮತ್ತು ನೇಮಕಾತಿಗಳ ಷರತ್ತುಗಳ ಕುರಿತು ಶಿಶು ಅಭಿವೃದ್ಧಿ ಯೋಜನೆಯ ನೋಟೀಸ ಬೋರ್ಡಿಗೆ ಹಾಗೂ ಅಂಗನವಾಡಿ ಕೇಂದ್ರಗಳ ನೋಟೀಸ್ ಬೋರ್ಡಿಗೆ, ವಲಯ ಅಧಿಕಾರಿಗಳ ಕಛೇರಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತು ತಹಶೀಲ್ದಾರ ಕಛೇರಿ ಹುಬ್ಬಳ್ಳಿ, ಧಾರವಾಡ, ತಾಲೂಕ ಪಂಚಾಯತ್ ಕಚೇರಿ ಧಾರವಾಡ, ಹುಬ್ಬಳ್ಳಿ ನಾಮಪಲಕದಲ್ಲಿ ಅಳವಡಿಸಿದ್ದು ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನೆ, ಹುಬ್ಬಳ್ಳಿ-ಧಾರವಾಡ (ಶಹರ) ಕಾರ್ಯಾಲಯವನ್ನು (ಕಛೇರಿ ದೂರವಾಣಿ ಸಂಖ್ಯೆ 0836-2440733) ಸಂಪರ್ಕಿಸಬಹುದು ಮತ್ತು ಅರ್ಜಿ ನಮೂನೆಯನ್ನು ಕಛೇರಿಯಿಂದ ಪಡೆಯಬಹುದು ಎಂದು ಹುಬ್ಬಳ್ಳಿ-ಧಾರವಾಡ (ಶಹರ) ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read