BREAKING: ಉರುಳಿಬಿದ್ದ 120 ಅಡಿ ಎತ್ತರದ ಬೃಹತ್ ತೇರು; ಜಾತ್ರೆಗೆ ಆಗಮಿಸುತ್ತಿದ್ದ ವೇಳೆ ದುರ್ಘಟನೆ

ಬೆಂಗಳೂರು: ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ಆಗಮಿಸುತ್ತಿದ್ದ ಬೃಹತ್ ತೇರೊಂದು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕಮ್ಮಸಂದ್ರದಲ್ಲಿ ನಡೆದಿದೆ.

ಹಿಲಲಿಗೆ ಗ್ರಾಮದಿಂದ 120 ಅಡಿ ಎತ್ತರದ ತೇರನ್ನು ಹುಸ್ಕೂರಿಗೆ ಎಳೆದು ತರಲಾಗುತ್ತಿತ್ತು. ಈ ವೇಳೆ ಕಮ್ಮಸಂದ್ರದಬಳಿ ತೇರು ನಿಯಂತ್ರಣ ತಪ್ಪಿ ಉಋಳಿ ಬಿದ್ದಿದೆ. ಎತ್ತುಗಳು, ಟ್ರ್ಯಾಕ್ಟರ್ ಮೂಲಕವಾಗಿ ತೇರನ್ನು ಎಳೆದು ತರಲಾಗುತ್ತಿತ್ತು.

ಈ ವೇಳೆ ಏಕಾಏಕಿ ತೇರು ಉರುಳಿಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಜಾತ್ರೆಗೆ ತೆರಳುತ್ತಿದ್ದ ಬೃಹತ್ ತೇರು ಏಕಾಏಕಿ ನಿಯಂತ್ರಣ ತಪ್ಪಿ ಬಿದ್ದಿರುವುದು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read