ಹುಟ್ಟು ಹಬ್ಬದ ಸಂಭ್ರಮದಲ್ಲಿ ಆಂಡ್ರೆ ರಸೆಲ್

ವೆಸ್ಟ್ ಇಂಡೀಸ್ ನ ದೈತ್ಯ ಬ್ಯಾಟ್ಸ್ ಮ್ಯಾನ್ ಆಂಡ್ರೆ ರಸೆಲ್ ಇಂದು ತಮ್ಮ 36ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2010 ನವೆಂಬರ್ 15 ರಂದು ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಸರಣಿಯ ಮೂಲಕ ಆಂಡ್ರೆ ರಸೆಲ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಸಿಕ್ಸರ್ ಬಾರಿಸುವಲ್ಲಿ  ಹೆಸರುವಾಸಿಯಾಗಿರುವ ಇವರು ಐಪಿಎಲ್ ನಲ್ಲಿ ಹಲವಾರು ದಾಖಲೆ ಬರೆದಿದ್ದಾರೆ.

ಐಪಿಎಲ್ ನಲ್ಲಿ ಕೆಕೆಆರ್ ತಂಡದ ಬೆನ್ನೆಲುಬಾಗಿರುವ ಇವರು ಕೊನೆಯ ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ ದೊಡ್ಡ ಮೊತ್ತ ಕಲೆ ಹಾಕಲು ಸಹಕಾರಿಯಾಗಿದ್ದಾರೆ. ಐಪಿಎಲ್ ನಲ್ಲಿ ಇದುವರೆಗೂ 120  ಪಂದ್ಯಗಳನ್ನಾಡಿದ್ದು, 2441 ರನ್ ಗಳಿಸಿದ್ದಾರೆ. ಇದರಲ್ಲಿ 11 ಅರ್ಧ ಶತಕಗಳಿವೆ. ಬಾಲಿಂಗ್ ನಲ್ಲೂ  ಪ್ರಮುಖ ಪಾತ್ರ ವಹಿಸುವ ಆಂಡ್ರೆ ರಸೆಲ್ 105 ವಿಕೆಟ್ ಕಬಳಿಸಿದ್ದಾರೆ.

ಕೊಲ್ಕತ್ತಾ ನೈಟ್ ರೈಡರ್ಸ್  ಪ್ರಾಂಚೈಸಿ ಸೇರಿದಂತೆ  ಹಲವಾರು ಕ್ರಿಕೆಟಿಗರು ಇಂದು  ಸೋಶಿಯಲ್ ಮೀಡಿಯಾದಲ್ಲಿ  ಆಂಡ್ರೆ ರಸೆಲ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

https://twitter.com/Srk_bangalore/status/1784867075346866268?ref_src=twsrc%5Egoogle%7Ctwcamp%5Eserp%7Ctwgr%5Etweet

https://twitter.com/RVCJ_Sports/status/1784870663376818600

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read