ಹೈದರಾಬಾದ್: ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಇಬ್ಬರು ಐಸಿಸ್ ಉಗ್ರರನ್ನು ಬಂಧಿಸಲಾಗಿದೆ.
ಆಂಧ್ರದ ವಿಜಯನಗರಂ ಜಿಲ್ಲೆಯ ಸಿರಾಜ್-ಉರ್-ರೆಹಮಾನ್ (29), ಹೈದರಾಬಾದ್ ನ ಸಿಕಂದರಾಬಾದ್ ನ ಭೋಯಿಗುಡದ ಸಯೀದ್ ಸಮೀರ್ (28) ಬಂಧಿತ ಉಗ್ರರು ಎಂದು ತಿಳಿದುಬಂದಿದೆ.
ಬಂಧಿತ ಉಗ್ರರು ಆನ್ ಲೈನ್ ಮೂಲಕ ಸ್ಫೋಟಕಗಳನ್ನು ಖರೀದಿಸಿ ವಿಜಯನಗರಂ ನಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಿದ್ದರು. ಸಂಭಾವ್ಯ ಭಯೋತ್ಪಾದಕ ದಾಳಿ ಬಗ್ಗೆ ಪ್ಲಾನ್ ರೂಪಿಸಿದ್ದರು. ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.