ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿರುವ ಶಾಪಿಂಗ್ ಮಾಲ್ ಒಂದರಲ್ಲಿ ಇಂದು ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಇದನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಪಡೆ ದೌಡಾಯಿಸಿದೆ.
ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಾಚಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಗ್ನಿ ಅವಘಡದ ತೀವ್ರತೆಯನ್ನು ಸಾರುತ್ತಿದೆ.
ಬೆಂಕಿ ಅನಾಹುತವನ್ನು ಸಹ ಬದಿಗೆ ತರಲು ಅಗ್ನಿಶಾಮಕ ಪಡೆ ಕಾರ್ಯಚರಣೆ ನಡೆಸುತ್ತಿದ್ದು, ಈವರೆಗೆ ಯಾವುದೇ ಹಾನಿ ಸಂಭವಿಸಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ.
#WATCH | A fire broke out at a shopping mall in Prakasam district of Andhra Pradesh. Fire tenders present on the spot. More details awaited. pic.twitter.com/0OZUVZ0bdR
— ANI (@ANI) June 24, 2023