ವಾಟ್ಸಾಪ್ ನಲ್ಲೇ 161 ಸರ್ಕಾರಿ ಸೇವೆ ಲಭ್ಯ: ‘ಮನ ಮಿತ್ರ’ ಯೋಜನೆಗೆ ಆಂಧ್ರದಲ್ಲಿ ಚಾಲನೆ

ಅಮರಾವತಿ: ವಾಟ್ಸಾಪ್ ನಲ್ಲಿ ಸರ್ಕಾರಿ ಸೇವೆಗಳನ್ನು ನೀಡುವ ಯೋಜನೆಗೆ ಆಂಧ್ರಪ್ರದೇಶದಲ್ಲಿ ಗುರುವಾರ ಚಾಲನೆ ನೀಡಲಾಗಿದೆ.

161 ಸರ್ಕಾರಿ ಸೇವೆಗಳು ಇನ್ನು ಮುಂದೆ ವಾಟ್ಸಾಟ್ ನಲ್ಲಿ ಲಭ್ಯವಿರಲಿವೆ. ಉತ್ತಮ ಮತ್ತು ಅನುಕೂಲಕರ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಆಂಧ್ರಪ್ರದೇಶ ಸರ್ಕಾರದ ಮನಮಿತ್ರ(ನನ್ನ ಗೆಳೆಯ) ಹೆಸರಿನ ವಾಟ್ಸಾಪ್ ಆಡಳಿತ ವೇದಿಕೆಯನ್ನು ಐಟಿ ಸಚಿವ ನಾ.ರಾ. ಲೋಕೇಶ್ ಬಿಡುಗಡೆ ಮಾಡಿದ್ದಾರೆ.

36 ಸರ್ಕಾರಿ ಇಲಾಖೆಗಳನ್ನು ಸಂಯೋಜಿಸಿ ಮನಮಿತ್ರ ರಚಿಸಲಾಗಿದ್ದು, ರಾಜ್ಯದ ಜನರು ದೇವಸ್ಥಾನ ಭೇಟಿಗೆ ಸಮಯ ನಿಗದಿ, ಬಸ್ ಟಿಕೆಟ್ ಬುಕಿಂಗ್, ಜನನ ಪ್ರಮಾಣ ಪತ್ರ, ಇಂಧನ, ಕಂದಾಯ, ಸಿಎಂ ಪರಿಹಾರ ನಿಧಿ, ಮುನ್ಸಿಪಲ್ ಕಾರ್ಪೊರೇಷನ್ ಗೆ ಸಂಬಂಧಿಸಿದ ಸೇವೆಗಳನ್ನು ಮೊದಲ ಹಂತದಲ್ಲಿ ಒದಗಿಸಲಾಗುವುದು.

161 ಸೇವೆಗಳು ಲಭ್ಯವಿದ್ದು, ಎರಡನೇ ಹಂತದಲ್ಲಿ ಹೆಚ್ಚುವರಿಯಾಗಿ 360 ಸೇವೆಗಳನ್ನು ಒದಗಿಸಲಾಗುವುದು. ತಿರುಪತಿ ತಿರುಮಲ ದೇವಸ್ಥಾನದ ಸೇವೆಗಳನ್ನು ಕೂಡ ಮುಂದಿನ ದಿನಗಳಲ್ಲಿ ಸೇರ್ಪಡೆ ಮಾಡಲಾಗುವುದು. ಕಳೆದ ವರ್ಷ ಅಕ್ಟೋಬರ್ 22ರಂದು ಆಂಧ್ರಪ್ರದೇಶ ವಾಟ್ಸಾಪ್ ಮೂಲಕ ಸೇವೆ ವಿಸ್ತರಿಸಲು ಮೆಟಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಸಾಮಾನ್ಯ ಜನರ ಡೇಟಾ ಅಪರಾಧಿಗಳ ಕೈಗೆ ಸಿಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read