ಅಮರಾವತಿ: ಆಂಧ್ರಪ್ರದೇಶಕ್ಕೆ ವಿದೇಶಿ ಕಂಪನಿಗಳು ಮತ್ತು ಹೂಡಿಕೆದಾರರನ್ನು ಆಕರ್ಷಿಸಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಕಾರ್ಮಿಕರ ಕಾಯ್ದೆಗೆ ತಿದ್ದುಪಡಿ ತಂದಿದೆ.
ಈ ಮೂಲಕ ಕಾರ್ಮಿಕರು ಒಂದು ದಿನಕ್ಕೆ ಗರಿಷ್ಠ 10 ಗಂಟೆಗಳ ವರೆಗೆ ಕೆಲಸ ಮಾಡಲು ಅನುಕೂಲ ಮಾಡಿಕೊಡಲಾಗಿದೆ.
ಈ ಮೊದಲು ಕಾಯ್ದೆ ಅನುಸಾರ ಕಾರ್ಮಿಕರ ಗರಿಷ್ಠ ಕಾರ್ಯ ನಿರ್ವಹಣೆ ಅವಧಿ 9 ಗಂಟೆ ಇತ್ತು. ಕಾಯ್ದೆಯ ಸೆಕ್ಷನ್ 55 ರ ಪ್ರಕಾರ ಪ್ರತಿ 5 ಗಂಟೆ ಕಾರ್ಯಾವಧಿಗೆ ಒಂದು ಗಂಟೆಯಷ್ಟು ವಿಶ್ರಾಂತಿಯನ್ನು ಈ ಮೊದಲು ನಿಗದಿಪಡಿಸಲಾಗಿತ್ತು. ಅದನ್ನು ಈಗ 6 ಗಂಟೆಗಳಿಗೆ ಏರಿಕೆ ಮಾಡಲಾಗಿದೆ. ಜೊತೆಗೆ ಪ್ರತಿ ತ್ರೈಮಾಸಿಕದ ಓವರ್ ಟೈಮ್ ಅನ್ನು ಈ ಮೊದಲು ಇದ್ದ 75 ಗಂಟೆಗಳಿಂದ 144 ಗಂಟೆಗಳಿಗೆ ಏರಿಕೆ ಮಾಡಲಾಗಿದೆ.