VIRAL VIDEO | ಅಪರೂಪದಲ್ಲಿ ಅಪರೂಪ ಈ ಪ್ರೀ ವೆಡ್ಡಿಂಗ್ ಫೋಟೋಶೂಟ್

ಪ್ರೀ ವೆಡ್ಡಿಂಗ್ ಮತ್ತು ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಇತ್ತೀಚಿಗೆ ಸಾಮಾನ್ಯವಾಗಿದೆ. ನವಜೋಡಿ ತಮ್ಮ ದಾಂಪತ್ಯದ ಆರಂಭಕ್ಕೂ ಮುನ್ನ ಮತ್ತು ಮದುವೆ ನಂತರ ಅದ್ಧೂರಿ ಫೋಟೋ ಶೂಟ್ ಮಾಡಿಸುತ್ತಾರೆ. ವಿಶೇಷ ಮತ್ತು ಉತ್ತಮ ವಸ್ತ್ರಧಾರಿಗಳಾಗಿ ಪ್ರಕೃತಿ ನಡುವೆ ಅಥವಾ ಸ್ಟುಡಿಯೋದಲ್ಲಿ ಫೋಟೋ ತೆಗೆಸಿಕೊಂಡು ಅದನ್ನು ಜೀವನಪೂರ್ತಿ ತಮ್ಮೊಂದಿಗೆ ಇಟ್ಟುಕೊಳ್ಳಲು ಬಯಸುತ್ತಾರೆ.

ಇಂತಹ ಫೋಟೋಶೂಟ್ ಗಳನ್ನು ನೋಡಿರುವ ಜನರಿಗೆ ಸಾಮಾನ್ಯವಾಗಿ ಆ ವೇಳೆ ಹುಡುಗ – ಹುಡುಗಿ ನೀಡುವ ಭಂಗಿ ( ಪೋಸ್ ) ಗಳ ಬಗ್ಗೆ ಅರಿವಿರುತ್ತದೆ. ಇಂತಹ ಅನೇಕ ಫೋಟೋ ಶೂಟ್ ಗಳನ್ನು ನೋಡಿರುವ ಆಂಧ್ರದ ದೋಣಿ ಚಾಲಕನೊಬ್ಬ ನವಜೋಡಿಗೆ ಫೋಟೋ ಶೂಟ್ ಗೆ ಹೇಗೆ ಪೋಸ್ ಕೊಡಬೇಕೆಂದು ಹೇಳಿಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡು ಗಮನ ಸೆಳೆದಿದೆ.

“ಎಷ್ಟೋ ಪ್ರೀ ವೆಡ್ಡಿಂಗ್ ಶೂಟ್‌ಗಳನ್ನು ನೋಡಿದ ನಂತರ, ಬೋಟ್‌ಮ್ಯಾನ್ ನಿರ್ದೇಶಕರಾದರು” ಎಂದು ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಮೇ 30 ರಂದು ಪೋಸ್ಟ್ ಮಾಡಿದ ನಂತರ, ವೀಡಿಯೊ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಕೆಲವರು ಬೋಟ್‌ ಚಾಲಕನ ನಿರ್ದೇಶನ ಕೌಶಲ್ಯಕ್ಕೆ ಪ್ರಭಾವಿತರಾಗಿದ್ದು ಇಷ್ಟಪಟ್ಟಿದ್ದಾರೆ.

https://twitter.com/Ananth_IRAS/status/1796057752932122713?ref_src=twsrc%5Etfw%7Ctwcamp%5Etweetembed%7Ctwterm%5E1796057752932122713%7Ctwgr%5E3038a33

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read