ಮಂಗಳೂರು: ಅನನ್ಯಾ ಭಟ್ ನನ್ನ ಮಗಳಲ್ಲ, ಕೆಲವರು ಹೀಗೆ ಹೇಳುವಂತೆ ನನ್ನನ್ನು ಹೆದರಿಸಿ ಹೇಳಿಸಿದ್ದರು ಎಂದು ಹೇಳಿಕೆ ನೀಡಿದ್ದ ಸುಜಾತಾ ಭಟ್ ವಿಚಾರವಾಗಿ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಪ್ರತಿಕ್ರಿಯೆ ನೀಡಿದ್ದಾರೆ.
ಸುಜಾತಾ ಭಟ್ ಅವರನ್ನು ನಾವು ಹೋಗಿ ಭೇಟಿ ಮಾಡಿಲ್ಲ. ಅವರೇ ಬಂದು ನಮ್ಮನ್ನು ಭೇಟಿಯಾಗಿದ್ದರು. ಅವರಿಗೆ ನೆರವು ನೀಡಬೇಕೆಂಬ ಕಾರಣಕ್ಕೆ ಮಾನವೀಯ ದೃಷ್ಟಿಯಿಂದ ನಾವು ನೆರವು ನೀಡಿದೆವು ಎಂದು ತಿಳಿಸಿದ್ದಾರೆ.
ಒಟ್ಟಾರೆ ಅನನ್ಯಾ ಭಟ್ ನಾಪತ್ತೆ ಪ್ರಕರಣವೂ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಎಸ್ ಐಟಿ ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಬೇಕಿದೆ.