ಗುರಿ ಸಾಧಿಸಲು ಒಂದೊಂದೇ ಹೆಜ್ಜೆ ಮುಂದಕ್ಕೆ: ವಿಡಿಯೋ ಶೇರ್​ ಮಾಡಿದ ಆನಂದ್ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆಯುವ ಚಮತ್ಕಾರಿ ಮತ್ತು ತಿಳುವಳಿಕೆ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾಗಿದ್ದಾರೆ. ಈಗ ಅವರು ನಿಮ್ಮ ಭವಿಷ್ಯವನ್ನು ನಿರ್ಮಿಸಲು ಪ್ರೇರೇಪಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಅವರು ಪೋಸ್ಟ್ ಮಾಡಿದ ವೀಡಿಯೊದಲ್ಲಿ, ವ್ಯಕ್ತಿಯೊಬ್ಬರು ಬೃಹತ್ ಟಿವಿ ಪರದೆಯನ್ನು ಸ್ಥಾಪಿಸುತ್ತಿರುವುದನ್ನು ಕಾಣಬಹುದು. ಒಂದೊಂದೇ ಟೈಲ್ಸ್ ಅಳವಡಿಸುವ ಮೂಲಕ ಬೃಹತ್​ ಪರದೆಯನ್ನು ರಚಿಸುವುದನ್ನು ನೋಡಬಹುದು.

ಇದನ್ನೇ ಉದಾಹರಣೆಯಾಗಿಟ್ಟುಕೊಂಡಿರುವ ಮಹೀಂದ್ರಾ ಅವರು, “ನಿಮ್ಮ ಜೀವನದ ಉದ್ದೇಶವನ್ನು ಈಡೇರಿಸಲು ಮೊದಲು ಒಂದೊಂದೇ ಹೆಜ್ಜೆ ಮುಂದಕ್ಕೆ ಹೋಗಬಹುದು. ಪ್ರತಿವಾರವೂ ಒಂದು ಹೆಜ್ಜೆ ಮುಂದಕ್ಕೆ ಹಾಕುತ್ತಾ ಸಾಗಿದರೆ ನಿಮ್ಮ ಗುರಿ ತಲುಪುತ್ತೀರಿ ಎನ್ನುವುದಕ್ಕೆ ಇದು ಸಾಕ್ಷಿ. ಒಂದೇ ಸಲ ಯಶಸ್ಸು ಬೇಕೆಂದರೆ ಸಿಗುವುದಿಲ್ಲ’ ಎಂದಿದ್ದಾರೆ.

ವೀಡಿಯೊವನ್ನು ಮೂಲತಃ ಟ್ವಿಟರ್‌ನಲ್ಲಿ ಹೌ ಥಿಂಗ್ಸ್ ವರ್ಕ್ ಮೂಲಕ ಪೋಸ್ಟ್ ಮಾಡಲಾಗಿದೆ. ಇಲ್ಲಿಯವರೆಗೆ, ವೀಡಿಯೊ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

https://twitter.com/anandmahindra/status/1642753260913319936?ref_src=twsrc%5Etfw%7Ctwcamp%5Etweetembed%7Ctwterm%5E1642753260913319936%7Ctwgr%5E95149dd14377d0b50af7e0b2d82911423bbdb51d%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fanand-mahindras-monday-motivation-tweet-is-all-about-one-step-at-a-time-3916303

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read