ವ್ಹೀಲ್​ಚೇರ್​ ಬಳಸುವವರಿಗೆ ಹೇಳಿ ಮಾಡಿಸಿದಂತಿದೆ ಈ ಕಾರು: ಹೂಡಿಕೆ ಮಾಡಲು ನಾನು ಸಿದ್ಧ ಅಂದ್ರು ಆನಂದ್​ ಮಹೀಂದ್ರಾ

ಮಹೀಂದ್ರಾ ಗ್ರೂಪ್​ ಚೇರ್​ಮನ್​ ಆನಂದ್​ ಮಹೀಂದ್ರಾ ಸೋಶಿಯಲ್​ ಮೀಡಿಯಾದಲ್ಲಿ ವಿಶೇಷ ವಿನ್ಯಾಸದ ಕಾರಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಕಾರಿನ ವಿನ್ಯಾಸ ಎಷ್ಟು ವಿಶಿಷ್ಟವಾಗಿದೆ ಎಂದರೆ ವ್ಹೀಲ್​ಚೇರ್​ಗಳನ್ನು ಬಳಸುವ ವ್ಯಕ್ತಿಯು ಕಾರಿನ ಒಳಗೆ ಆರಾಮದಾಯಕವಾಗಿ ಕುಳಿತುಕೊಳ್ಳಲು ಇದು ಸಹಾಯ ಮಾಡುವಂತೆ ಡಿಸೈನ್​ ಮಾಡಲಾಗಿದೆ.

ಕಾರಿನ ವಿನ್ಯಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಆನಂದ್​ ಮಹೀಂದ್ರಾ ವ್ಹೀಲ್​ಚೇರ್​ ಬಳಕೆ ಮಾಡುವವರಿಗೆ ಈ ರೀತಿಯ ವಿನ್ಯಾಸದ ಕಾರಿನ ಅವಶ್ಯಕತೆ ಇದೆ. ಹೀಗಾಗಿ ಇಂತಹ ಸ್ಟಾರ್ಟಪ್​ ಪ್ರಯತ್ನಕ್ಕೆ ಹೂಡಿಕೆ ಮಾಡಲು ನಾನು ಸಿದ್ಧನಿದ್ದೇನೆ ಎಂದು ತಮ್ಮ ಇಚ್ಛೆ ಹೊರಹಾಕಿದ್ದಾರೆ.

ಸೂಪರ್​ ಸ್ಮಾರ್ಟ್ ಹಾಗೂ ಉಪಯುಕ್ತ ವಿನ್ಯಾಸ ಹೊಂದಿದೆ. ಈ ವಾಹನದ ವಿನ್ಯಾಸ ಮಾಡಿರುವವರಿಗೆ ಹೂಡಿಕೆದಾರರ ಅಗತ್ಯವಿದೆ ಎಂದು ನಾನು ನಂಬಿದ್ದೇನೆ. ಹೀಗಾಗಿ ಇಂತಹ ಸ್ಟಾರ್ಟಪ್​​ನಲ್ಲಿ ನಾನು ಸ್ವಇಚ್ಛೆಯಿಂದ ಹೂಡಿಕೆ ಮಾಡಲು ಸಿದ್ಧನಿದ್ದೇನೆ ಎಂದು ಎಕ್ಸ್​ನಲ್ಲಿ ಆನಂದ್​ ಮಹೀಂದ್ರಾ ಬರೆದುಕೊಂಡಿದ್ದಾರೆ.

ಮೂಲ ಶೀರ್ಷಿಕೆಯ ಪ್ರಕಾರ, ವೈಶಿಷ್ಟ್ಯಗೊಳಿಸಿದ ಕಾರು ಹವಾಮಾನ ನಿರೋಧಕ ಮೇಲ್ಛಾವಣಿ ಪೆಟ್ಟಿಗೆಯನ್ನು ಹೊಂದಿದೆ. ಅದು ಪ್ರಯಾಣದ ಸಮಯದಲ್ಲಿ ಗಾಲಿಕುರ್ಚಿಯನ್ನು ಸುರಕ್ಷಿತವಾಗಿ ಸಂಗ್ರಹಿಸುತ್ತದೆ. ಅಂಗವಿಕಲ ಬಳಕೆದಾರರು ವಾಹನದಿಂದ ನಿರ್ಗಮಿಸಲು ಸಿದ್ಧರಾದಾಗ, ಅವರಿಗೆ ಗಾಲಿಕುರ್ಚಿಯನ್ನು ತರಲಾಗಿದೆ ಎಂದು ತಾಂತ್ರಿಕ ಪರಿಹಾರವು ಖಚಿತಪಡಿಸುತ್ತದೆ. ಈ ಆವಿಷ್ಕಾರದ ವೈಶಿಷ್ಟ್ಯವು ಚಾಲಕರ ಸ್ವಾತಂತ್ರ್ಯವನ್ನು ಹೆಚ್ಚಿಸುವುದಲ್ಲದೆ ವಿಶೇಷ ಚಲನಶೀಲತೆಯ ಅಗತ್ಯತೆಗಳೊಂದಿಗೆ ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read