ಭಾರತದ 51 ನದಿಗಳನ್ನು ಹೆಸರಿಸುವ ಅದ್ಭುತ ಹಾಡಿನ ವಿಡಿಯೋ ವೈರಲ್​

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ನಮ್ಮನ್ನು ವಿಸ್ಮಯಗೊಳಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಮಹೀಂದ್ರಾ ಗ್ರೂಪ್ ಅಧ್ಯಕ್ಷರ ಟ್ವಿಟರ್ ಹ್ಯಾಂಡಲ್ ಆಸಕ್ತಿದಾಯಕ, ಸ್ಫೂರ್ತಿದಾಯಕ ಮತ್ತು ಹಾಸ್ಯಮಯ ಟ್ವೀಟ್‌ಗಳಿಂದ ತುಂಬಿರುತ್ತದೆ. ಜೊತೆಗೆ ಅವರ 10.4 ಮಿಲಿಯನ್ ಅನುಯಾಯಿಗಳಿಗೆ ಜೀವನ ಪಾಠಗಳನ್ನು ಮಾಡುತ್ತಿರುತ್ತಾರೆ.

ಈ ಬಾರಿ, ಅವರು ನೀರಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತದ ನದಿಗಳನ್ನು ಆಧರಿಸಿದ ಸಂಗೀತ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ‘ರಿವರ್ಸ್ ಆಫ್ ಇಂಡಿಯಾ’ ಶೀರ್ಷಿಕೆಯ ಹಾಡಿನಲ್ಲಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ ಭಾರತದಾದ್ಯಂತದ 51 ನದಿಗಳ ಹೆಸರುಗಳಿವೆ.

”ಭಾರತದ 51 ನದಿಗಳ ಹೆಸರನ್ನು ಆಧರಿಸಿದ ಅದ್ಭುತ ಹಾಡು. ಈ ಅಮೂಲ್ಯ ಸಂಪನ್ಮೂಲದ ಬಗ್ಗೆ ಜಾಗೃತಿ ಮೂಡಿಸಲು ರಚಿಸಲಾಗಿದೆ. ಬಾಂಬೆ ಜಯಶ್ರೀ (ಮತ್ತು ಅವರ ಮಗ ಅಮೃತ್) ಕೌಶಿಕಿ ಚಕ್ರವರ್ತಿ (ಮತ್ತು ಅವರ ಮಗ ರಿಷಿತ್) ಮತ್ತು ಇತರ ಅನೇಕರನ್ನು ಒಳಗೊಂಡ ಜಾಗತಿಕ ಸಹಯೋಗವನ್ನು ಈ ಗಾಯನದಲ್ಲಿ ಕಾಣಬಹುದು. ಸಂಗೀತವು ನಿಮ್ಮ ಮೂಲಕ ಹರಿಯಲಿ ನದಿಯಂತೆ, ಅದನ್ನು ಆನಂದಿಸಿ” ಎಂದು ಮಹೀಂದ್ರಾ ಬರೆದುಕೊಂಡಿದ್ದಾರೆ.

ಈ ವೀಡಿಯೋದಲ್ಲಿ ದೇಶಾದ್ಯಂತದ ನದಿಗಳ ಸೌಂದರ್ಯ ಮತ್ತು ಶಕ್ತಿಯನ್ನು ನೋಡಬಹುದು. ಪರ್ವತಗಳಿಂದ ಹುಟ್ಟಿದ ನದಿಗಳು ಸೇರಿದಂತೆ ವಿವಿಧ ಭೂದೃಶ್ಯಗಳ ಮೂಲಕ ಹರಿಯುವ ಸೌಂದರ್ಯವನ್ನು ಇದರಲ್ಲಿ ಸವಿಯಬಹುದು.

https://twitter.com/anandmahindra/status/1634417373414563841?ref_src=twsrc%5Etfw%7Ctwcamp%5Etweetembed%7Ctwterm%5E1634417373414563841%7Ctwgr%5Eb9170e1369cadf890b949ed2f0786f9b5406ca52%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fanand-mahindra-shares-music-video-based-on-51-rivers-of-india-internet-loves-it-3853636

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read