ಕೃತಕ ಬುದ್ಧಿಮತ್ತೆ ಬಳಸಿ ಮೂರ್ಖರಾಗಿಸುವ ತಂತ್ರ: ವಿಡಿಯೋ ಮೂಲಕ ಜಾಗೃತಿ

ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ತಮ್ಮ ಅನುಯಾಯಿಗಳನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕೆಂದು ತಿಳಿದಿದ್ದಾರೆ. ಈ ಕೈಗಾರಿಕೋದ್ಯಮಿ ಟ್ವಿಟರ್‌ನಲ್ಲಿ ಸಾಕಷ್ಟು ಮಾಹಿತಿಯುಕ್ತ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ.

ಜನವರಿ 21 ರಂದು, ಅವರು “ಮೋಸಗೊಳಿಸುವ ವಿಷಯ” ಕುರಿತು ಜನರನ್ನು ಎಚ್ಚರಿಸಲು ಮತ್ತೊಂದು ವಿಡಿಯೋ ಅನ್ನು ಪೋಸ್ಟ್ ಮಾಡಿದರು. ವಿಡಿಯೋದಲ್ಲಿ, ಒಬ್ಬ ವ್ಯಕ್ತಿಯು AI ಬಳಸಿ ಮಾಡಿದ ಜಾಗೃತಿ ಕ್ಲಿಪ್ ಅನ್ನು ಶೇರ್​ ಮಾಡಿದ್ದಾರೆ.

ಈಗ ವೈರಲ್ ಆಗಿರುವ ವಿಡಿಯೋವನ್ನು ಮೂಲತಃ ಇನ್​ಸ್ಟಾಗ್ರಾಮ್​ನಲ್ಲಿ Beebomco ಎಂಬ ಪುಟವು ಹಂಚಿಕೊಂಡಿದೆ. ವಿಡಿಯೋದಲ್ಲಿ, ಒಬ್ಬ ವ್ಯಕ್ತಿಯು ನಕಲಿ ವಿಡಿಯೋ ಮತ್ತು ಅವುಗಳ ಪ್ರಭಾವದ ಬಗ್ಗೆ ಮಾತನಾಡುವುದನ್ನು ಕಾಣಬಹುದು. ಅದನ್ನು ರಚಿಸಲು ಅವರು ಕೃತಕ ಬುದ್ಧಿಮತ್ತೆಯನ್ನು (AI) ಬಳಸಿದ್ದಾರೆ.

ಒಬ್ಬ ವ್ಯಕ್ತಿ ತನ್ನನ್ನು ವಿರಾಟ್ ಕೊಹ್ಲಿ, ರಾಬರ್ಟ್ ಡೌನಿ ಜೂನಿಯರ್, ದುಲ್ಕರ್ ಸಲ್ಮಾನ್ ಮತ್ತು ಶಾರುಖ್ ಖಾನ್ ಎಂದು ಚಿತ್ರಿಸಿಕೊಂಡು ಹೇಗೆ ಜನರನ್ನು ಮೂರ್ಖ ಮಾಡಬಲ್ಲ ಎನ್ನುವುದನ್ನು ಇದು ತೋರಿಸುತ್ತದೆ. ಈ ವಿಡಿಯೋ ನೋಡಿ ಜನರು ಎಚ್ಚರಿಕೆಯಿಂದ ಇರಬೇಕಿದೆ. ಮೋಸ ಮಾಡುವ ಸುಲಭ ಪ್ರಕ್ರಿಯೆ ಇದಾಗಿದೆ ಎಂದು ಮಹೀಂದ್ರಾ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read