ಷರ್ಟ್​ ಮಡಿಚುವ ಸುಲಭ ವಿಧಾನ ಕಲಿಸಿದ ಯುವತಿ: ವಿಡಿಯೋ ವೈರಲ್

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುತ್ತಾರೆ. ತಮಗೆ ಏನಾದರೂ ಕುತೂಹಲ ಎನ್ನಿಸಿದ್ದನ್ನು ಕಂಡರೆ ಅದನ್ನು ಶೇರ್​ ಮಾಡಿಕೊಳ್ಳುತ್ತಾರೆ. ಅಂಥದ್ದೇ ಒಂದು ಕುತೂಹಲದ ವಿಡಿಯೋ ಈಗ ವೈರಲ್​ ಆಗಿದೆ.‌

ತುಂಬಾ ಸಿಂಪಲ್​ ಎನಿಸಿದರೂ ಅಸಾಧ್ಯವೆನಿಸುವ ವಿಡಿಯೋ ಇದಾಗಿದೆ. ಅದು ಷರ್ಟ್​ ಒಂದನ್ನು ಸುಲಭದಲ್ಲಿ ಮಡಿಸುವ ವಿಧಾನವಾಗಿದೆ.

ಸಾಧಾರಣವಾಗಿ ಎಲ್ಲರಿಗೂ ಇದು ತಿಳಿದಿರುತ್ತದೆ. ಆದರೆ ಅತಿ ಸುಲಭದಲ್ಲಿ ಅತ್ಯಂತ ಸುಂದರವಾಗಿ ಷರ್ಟ್​ ಮಡಚಿ ಇಡುವ ವಿಧಾನವೊಂದು ಯುವತಿ ತೋರಿಸುತ್ತಿದ್ದಾಳೆ.

ಇದರಲ್ಲಿ ಯುವತಿಯು ಟೀ ಶರ್ಟ್ ಮಡಚಿರುವುದನ್ನು ಕಾಣಬಹುದು. ಬಟ್ಟೆಯ ತುಂಡಿನ ಒಂದು ಬದಿಯಲ್ಲಿ 1,2 ಮತ್ತು 3 ಸಂಖ್ಯೆಗಳನ್ನು ಬರೆದ ಸಣ್ಣ ಕಾರ್ಡ್‌ಗಳನ್ನು ಹಾಕಿದ್ದಾಳೆ. ಮತ್ತು ಆ ನಂಬರ್​ ಕಾರ್ಡ್​​ ತೆಗೆದು ಅದೇ ಸ್ಥಳಗಳಿಂದ ಮಡಚುತ್ತಾಳೆ.

ಕೆಲ ಸೆಕೆಂಡ್​ನಲ್ಲಿಯೇ ಷರ್ಟ್​ ಅನ್ನು ಅತ್ಯಂತ ಸುಂದರವಾಗಿ ಮಡಚುತ್ತಾಳೆ. ಇದನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಈಕೆ ತೋರಿಸುವುದು ಸುಲಭ ಎನ್ನಿಸಿದರೂ ಅಷ್ಟು ಸುಂದರವಾಗಿ ಮಡಚಲು ಬರುವುದು ಕಷ್ಟ ಎನ್ನುತ್ತಿದ್ದಾರೆ.

https://twitter.com/anandmahindra/status/1643529592408535040?ref_src=twsrc%5Etfw%7Ctwcamp%5Etweetembed%7Ctwterm%5E1643529592408535040%7Ctwgr%5E22a2110ff270041402dba2e29554d97773a9c80b%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fanand-mahinda-is-simply-fascinated-by-the-technique-this-woman-uses-to-fold-a-t-shirt-watch-video-2356046-2023-04-05

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read