‘ರಾಮಲಲ್ಲಾ’ ವಿಗ್ರಹದ ಎದುರು ಕೈ ಮುಗಿದು ನಿಂತ ಬಿಗ್ ಬಿ; ಫೋಟೋ ಹಂಚಿಕೊಂಡು ‘ನಾನು ಧನ್ಯ’ ಎಂದು ಹೇಳಿದ ಹಿರಿಯ ನಟ..!

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸೋಮವಾರದಂದು ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯ ಯಜಮಾನನ ಸ್ಥಾನದಲ್ಲಿ ನಿಂತು ವೈದಿಕ ಸಂಪ್ರದಾಯಕ್ಕೆ ಅನುಗುಣವಾಗಿ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದು, ಈ ಪೈಕಿ ಹಿರಿಯ ನಟ ಅಮಿತಾಬ್ ಬಚ್ಚನ್ ಕೂಡ ಒಬ್ಬರು. ತಮ್ಮ ಪುತ್ರ ಅಭಿಷೇಕ್ ಜೊತೆ ಅಮಿತಾಬ್ ಬಚ್ಚನ್ ಆಗಮಿಸಿದ್ದು, ಇಂದು ಆ ಸುಂದರ ಕ್ಷಣಗಳ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಹಂಚಿಕೊಂಡಿದ್ದಾರೆ.

ಅಯೋಧ್ಯೆ ರಾಮ ಮಂದಿರದಲ್ಲಿ ‘ರಾಮಲಲ್ಲಾ’ ವಿಗ್ರಹದ ಎದುರು ಭಕ್ತಿ ಭಾವದಿಂದ ಕೈ ಮುಗಿದು ನಿಂತಿರುವ ತಮ್ಮ ಫೋಟೋವನ್ನು ಹಂಚಿಕೊಂಡಿರುವ ಬಿಗ್ ಬಿ, “Bol siya pati Ramchandra ki Jai” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಈ ಐತಿಹಾಸಿಕ ಸಮಾರಂಭದ ಹಲವು ಚಿತ್ರಗಳನ್ನು ಸಹ ಅಮಿತಾಬ್ ಬಚ್ಚನ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಯೋಧ್ಯೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾನು ಧನ್ಯನಾದೆ ಎಂದು ಅಮಿತಾಬ್ ಬಚ್ಚನ್ ಮಾಧ್ಯಮದ ಬಳಿ ಹೇಳಿಕೊಂಡಿದ್ದಾರೆ.

ಇನ್ನು ಸೋಮವಾರ ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್ ಮಾತ್ರವಲ್ಲದೆ, ರಜನಿಕಾಂತ್, ಚಿರಂಜೀವಿ, ಚಿರಂಜೀವಿ ಅವರ ಪುತ್ರ ರಾಮಚರಣ್, ಧನುಷ್, ಕಂಗನಾ ರಣಾವತ್, ಆಲಿಯಾ ಭಟ್, ರಣಧೀರ್ ಕಪೂರ್, ಕತ್ರಿನಾ ಕೈಫ್, ವಿಕ್ಕಿ ಕೌಶಲ್, ಆಯುಷ್ಮಾನ್ ಖುರಾನಾ, ನಿರ್ದೇಶಕ ರಾಜ್ ಕುಮಾರ್ ಹಿರಾನಿ, ಮಧುರ್ ಭಂಡಾರ್ಕರ್ ಮೊದಲಾದವರು ಪಾಲ್ಗೊಂಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read