ಶನಿವಾರ ರಾಜ್ಯ ಪ್ರವಾಸದಲ್ಲಿದ್ದ ಕೇಂದ್ರ ಸಚಿವ ಅಮಿತ್ ಶಾ ಅವರು ಕಾಂತಾರ ಸಿನಿಮಾ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ರು.
ಪುತ್ತೂರಿನಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಉದ್ಘಾಟನೆಯಲ್ಲಿ ಮಾತನಾಡಿದ ಅಮಿತ್ ಶಾ ದಕ್ಷಿಣ ಕರ್ನಾಟಕಕ್ಕೆ ದೊಡ್ಡ ಸಂಸ್ಕೃತಿಯೇ ಇದೆ. ನಾನು ಕಾಂತಾರ ಸಿನಿಮಾ ನೋಡಿದ್ದೇನೆ. ಕಾಂತಾರ ನೋಡಿದ ಬಳಿಕ ಸಮೃದ್ದ ಪರಂಪರೆ ಬಗ್ಗೆ ಗೊತ್ತಾಯ್ತು ಅಂದ್ರು.
ಮಂಗಳೂರು ಪವಿತ್ರವಾದ ಭೂಮಿ. ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಕೃಷಿ ಮಾಡುವ ಮೂಲಕ ಜನರು ದೇಶವನ್ನು ಸಮೃದ್ಧವಾಗಿ ಮಾಡುವ ಪ್ರದೇಶಗಳು ಬಹಳ ಕಡಿಮೆ ಎಂದು ಹೇಳುತ್ತಾ ಕಾಂತಾರಾ ಸಿನಿಮಾವನ್ನ ಶ್ಲಾಘಿಸಿದರು.
https://twitter.com/RitamAppKannada/status/1624389889587568641?ref_src=twsrc%5Etfw%7Ctwcamp%5Etweetembed%7Ctwterm%5E1624389889587568641%7Ctwgr%5E68c3b54f777b880548380c4a496be7480e194066%7Ctwcon%5Es1_&ref_url=https%3A%2F%2Fwww.freepressjournal.in%2Fentertainment%2Fregional-film-news%2Famit-shah-praises-rishab-shettys-kantara-got-to-know-karnatakas-culture-after-watching-the-film-watch-video