BIG NEWS: ಅಯೋಧ್ಯೆ ರಾಮ ಮಂದಿರ ಮಾದರಿಯಲ್ಲೇ ಭವ್ಯ ಸೀತಾ ಮಾತೆ ಮಂದಿರ ನಿರ್ಮಾಣ: ಅಮಿತ್ ಶಾ ಘೋಷಣೆ

ಅಹಮದಾಬಾದ್: ಅಯೋಧ್ಯೆಯ ಶ್ರೀರಾಮ ಮಂದಿರ ಮಾದರಿಯಲ್ಲೇ ಭವ್ಯ ಸೀತಾ ಮಾತಾ ಮಂದಿರ ನಿರ್ಮಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಶಾಶ್ವತ ಮಿಥಿಲಾ ಮಹೋತ್ಸವ -2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಿಥಿಲಾಂಚಲ ಹಾಗೂ ಬಿಹಾರದ ಜನರು ವಲಸೆ ಬಂದು ಗುಜರಾತ್ ನಲ್ಲಿ ಜೀವನ ರೂಪಿಸಿಕೊಂಡಿದ್ದಾರೆ. ಅವರಿಂದ ಗುಜರಾತ್ ಅಭಿವೃದ್ಧಿಗೆ ಕೊಡುಗೆ ಸಿಕ್ಕಿದೆ ಎಂದು ಹೇಳಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಹಾರಕ್ಕೆ ತೆರಳಿದಾಗ ಸೀತಾಮಾತೆಯ ಮಂದಿರ ನಿರ್ಮಾಣದ ಭರವಸೆ ನೀಡಿದ್ದೆ. ಅದನ್ನು ಸಾಕಾರಗೊಳಿಸುವ ಸಮಯ ಈಗ ಬಂದಿದೆ. ಅಯೋಧ್ಯೆಯ ರಾಮಮಂದಿರ ಮಾದರಿಯಲ್ಲಿಯೇ ಬಿಹಾರದಲ್ಲಿ ಸೀತಾಮಾತೆಯ ಮಂದಿರ ನಿರ್ಮಾಣ ಮಾಡಲಾಗುವುದು. ಈ ಮಂದಿರವು ದೇಶದ ನಾರಿ ಶಕ್ತಿಯ ಪ್ರತೀಕವಾಗಿ ವಿಶ್ವದ ಗಮನ ಸೆಳೆಯಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read