ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಕಿತ್ತಾಟಕ್ಕಿಂತ ಹೆಚ್ಚಾಗಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆದ ವಿಚಾರದ ಬಗ್ಗೆ ಮಾತನಾಡಿ, ಒಬ್ಬೊಬ್ಬ ಶಾಸಕರಿಗೆ 50 ಕೋಟಿ ರೂ. ಕೊಡುತ್ತಿದ್ದಾರೆ ಎಂದು ಕೇಳಿಪಟ್ಟಿದ್ದೆವು. ಈಗ ಸ್ವಲ್ಪ ಚೌಕಾಸಿ ಹೆಚ್ಚಾಗಿದೆ. ಕೆಲವರು 75 ಕೋಟಿ ರೂ. ಕೇಳುತ್ತಿದ್ದಾರೆ. 75 ಕೋಟಿ, 100 ಕೋಟಿ ಕೊಟ್ಟರೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಇವರು ಅಷ್ಟು ಆಗುವುದಿಲ್ಲ. ಇವತ್ತು ಎಷ್ಟು ಇದೆ ತಗೊಳ್ಳಿ ಎನ್ನುತ್ತಿದ್ದಾರೆ ಎಂದು ಹೇಳಿದ್ದಾರೆ.
50 ಕೋಟಿ ಹಣದ ಜೊತೆಗೆ ಒಂದು ಫ್ಲ್ಯಾಟ್ ಕೊಡುವ ಆಫರ್ ಕೊಟ್ಟಿದ್ದಾರೆ. ಜೊತೆ ಒಂದು ಫಾರ್ಚೂನರ್ ಕಾರ್ ಕೊಡ್ತೀವಿ ಅಂತಾನೂ ಹೇಳುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಆಫರ್ ನಡೆಯುತ್ತಿದೆ ಎಂದು ನನಗೆ ಮೆಸೇಜ್ ಬಂದಿದೆ ಬೆಂಗಳೂರಿನಲ್ಲಿ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
