ದೆಹಲಿ ಹಾರರ್ ಬಳಿಕ ಮಹಾರಾಷ್ಟ್ರದಲ್ಲಿ ಮತ್ತೊಂದು ಘಟನೆ; ಗೆಳತಿ ಕೊಂದು ಹಾಸಿಗೆಯಲ್ಲಿ ತುಂಬಿಟ್ಟ ಲಿವ್ ಇನ್ ಸಂಗಾತಿ

ದೇಶವನ್ನೇ ಬೆಚ್ಚಿಬೀಳಿಸಿದ ಶ್ರದ್ಧಾ ವಾಲ್ಕರ್ ಭೀಕರ ಹತ್ಯೆ ಪ್ರಕರಣದ ಬೆನ್ನಲ್ಲೇ ಮತ್ತೊಂದು ಅಂತಹುದೇ ಘಟನೆ ಅಲ್ಲಿ ನಡೆದಿತ್ತು. ಇದೀಗ ಮಹಾರಾಷ್ಟ್ರದಲ್ಲೂ ಅದನ್ನೇ ಹೋಲುವ ಪ್ರಕರಣ ಬೆಳಕಿಗೆ ಬಂದಿದ್ದು ಗೆಳತಿಯನ್ನ ಕೊಂದ ವ್ಯಕ್ತಿ ಶವವನ್ನು ಹಾಸಿಗೆಯಲ್ಲಿ ತುಂಬಿಟ್ಟಿದ್ದ.

ಮಹಾರಾಷ್ಟ್ರದ 37 ವರ್ಷದ ವ್ಯಕ್ತಿ ತನ್ನ ಲಿವ್ ಇನ್ ರಿಲೇಷನ್ ಶಿಪ್ ಗೆಳತಿಯನ್ನು ಕೊಂದು ಅವಳ ದೇಹವನ್ನು ಹಾಸಿಗೆಯಲ್ಲಿ ತುಂಬಿದ್ದಾನೆ. ಪಾಲ್ಘರ್ ಜಿಲ್ಲೆಯ ತುಳಿಂಜ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮೂಲಗಳ ಪ್ರಕಾರ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಲಸೋಪಾರಾದ ವಿಜಯ್ ನಗರ ಪ್ರದೇಶದ ಫ್ಲಾಟ್‌ನಿಂದ ಸಂತ್ರಸ್ತರಾದ ಮೇಘಾ ಶಾ (40) ಅವರ ಕೊಳೆತ ದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಲ್ಘರ್‌ನ ತುಳಿಂಜ್ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ. ಎರಡು ದಿನಗಳಿಂದ ನಾಪತ್ತೆಯಾಗಿದ್ದ ಆಕೆಯ ಲಿವ್ ಇನ್ ಪಾಲುದಾರ ಹಾರ್ದಿಕ್ ನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಪ್ರಾಥಮಿಕ ತನಿಖೆಯ ಪ್ರಕಾರ ಸಂತ್ರಸ್ತೆ ವೃತ್ತಿಯಲ್ಲಿ ನರ್ಸ್ ಆಗಿದ್ದು, ಇಬ್ಬರೂ ಕಳೆದ ಆರು ತಿಂಗಳಿಂದ ಸಂಬಂಧ ಹೊಂದಿದ್ದರು. ಅಪಾರ್ಟ್‌ಮೆಂಟ್‌ನಿಂದ ಹೊರ ಬರುತ್ತಿದ್ದ ದುರ್ವಾಸನೆಯಿಂದ ಅಕ್ಕಪಕ್ಕದ ಜನರು ಪೊಲೀಸರಿಗೆ ವಿಷಯ ತಿಳಿಸಿದ್ದರು. ನೆರೆಹೊರೆಯವರ ಪ್ರಕಾರ, ಮಹಿಳೆ ಕೆಲವು ದಿನಗಳ ಹಿಂದೆ ಕಟ್ಟಡಕ್ಕೆ ಬಾಡಿಗೆಗೆ ಬಂದಿದ್ದರು

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read