ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಪ್ರೀತಿಯ ಬಗ್ಗೆ ಈಗಾಗಲೇ ಹಲವಾರು ವದಂತಿಗಳು ಹಬ್ಬುತ್ತಿವೆ. ಇತ್ತೀಚೆಗೆ ರಶ್ಮಿಕಾ ನೀಡಿದ ಒಂದು ಹೇಳಿಕೆಯಿಂದಾಗಿ ಈ ವದಂತಿಗಳು ಮತ್ತೊಮ್ಮೆ ಜೋರಾಗಿ ಕೇಳಿಬರುತ್ತಿವೆ.
2018ರಲ್ಲಿ ಬಿಡುಗಡೆಯಾದ ‘ಗೀತ ಗೋವಿಂದಂ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ ನಂತರ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬುದರ ಕುರಿತು ಹಲವಾರು ವದಂತಿಗಳು ಹಬ್ಬಿದ್ದವು. ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಫೋಟೋಗಳು ಮತ್ತು ವೀಡಿಯೋಗಳು ಈ ವದಂತಿಗಳಿಗೆ ಇಂಬು ನೀಡುತ್ತಿವೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ನೀಡಿದ ಹೇಳಿಕೆ ವೈರಲ್ ಆಗಿದೆ. ಅವರು ತಮ್ಮ ಸಂತೋಷದ ಸ್ಥಳದ ಬಗ್ಗೆ ಮಾತನಾಡುತ್ತಾ, “ನನ್ನ ಮನೆಯೇ ನನ್ನ ಸಂತೋಷದ ಸ್ಥಳ. ಅದು ನನಗೆ ನೆಮ್ಮದಿಯನ್ನು ನೀಡುತ್ತದೆ. ನಾನು ಬೇರೂರಿರುವಂತೆ ಭಾಸವಾಗುತ್ತದೆ. ಯಶಸ್ಸು ಬಂದು ಹೋಗಬಹುದು ಆದರೆ ಮನೆ ಯಾವಾಗಲೂ ಇರುತ್ತದೆ. ನನಗೆ ಸಿಗುವ ಪ್ರೀತಿ, ಖ್ಯಾತಿ ಮತ್ತು ಗೋಚರತೆ ಎಷ್ಟೇ ಇದ್ದರೂ, ನಾನು ಇನ್ನೂ ಒಬ್ಬ ಮಗಳು, ಒಬ್ಬ ಸಹೋದರಿ ಮತ್ತು ಒಬ್ಬ ಪಾರ್ಟ್ನರ್ ಮಾತ್ರ. ನಾನು ನನ್ನ ವೈಯಕ್ತಿಕ ಜೀವನವನ್ನು ಬಹಳ ಗೌರವಿಸುತ್ತೇನೆ” ಎಂದು ಹೇಳಿದ್ದಾರೆ.
“ಪಾರ್ಟ್ನರ್” ಎಂಬ ಪದವನ್ನು ಬಳಸಿದ್ದು ವಿಜಯ್ ದೇವರಕೊಂಡ ಅವರೊಂದಿಗಿನ ತಮ್ಮ ಪ್ರೀತಿಯನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ. ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ರಶ್ಮಿಕಾ ಶೀಘ್ರದಲ್ಲೇ ವಿಕಿ ಕೌಶಲ್ ಜೊತೆ ನಟಿಸುತ್ತಿರುವ ‘ಚಾವಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.