ಅಮೆರಿಕಾ ವಿಮಾನದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ತುರ್ತು ಬೂಸ್ಪರ್ಶ ಮಾಡಿಋವ ಘಟನೆ ನಡೆದಿದೆ.
ಅಮೆರಿಕದ ಕೊಲೊರಾಡೋ ಸ್ಟ್ರಿಂಗ್ಸ್ ನಿಂದ 178 ಜನರನ್ನು ಹೊತ್ತು ಡಲ್ಲಾಸ್ ಪೋರ್ಟ್ ವರ್ತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ಈ ವೇಳೆ ವಿಮಾನದ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ತಕ್ಷಣ ಡೆನ್ವರ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. ಲ್ಯಾಂಡ್ ಆಗುತ್ತಿದಂತೆ ವಿಮಾನದಲ್ಲಿ ಬೆಂಕಿ ತೀವ್ರತೆ ಇನ್ನಷ್ಟು ಹೆಚ್ಚಿದ್ದು ವಿಮಾನ ನಿಲ್ದಾಣದಲ್ಲಿ ದಟ್ಟ ಹೊಗೆ ಆವರಿಸಿದೆ. ತಕ್ಷಣ ವಿಮಾನ ಸಿಬ್ಬಂದಿ 6 ಸಿಬ್ಬಂದಿ ಸೇರಿದಂತೆ 178 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ಅವಘಡದಲ್ಲಿ 12 ಜನರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಗಿದೆ ಎಂದು ತಿಳಿದುಬಂದಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.