ಲಂಡನ್ ನಲ್ಲಿ ಮುಂದುವರೆಯಲಿದೆ ಅನಂತ್ ಮದುವೆ ಮಹೋತ್ಸವ: ಎರಡು ತಿಂಗಳಿಗೆ ಸೆವೆನ್ ಸ್ಟಾರ್ ಹೊಟೇಲ್ ಬುಕ್

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವ  ಲಂಡನ್‌ನಲ್ಲಿ ಮುಂದುವರಿಯಲಿದೆ.  ಮುಖೇಶ್ ಅಂಬಾನಿ  ಎರಡು ತಿಂಗಳ ಅವಧಿಗೆ ಸೆವೆನ್ ಸ್ಟಾರ್ ಹೊಟೇಲ್ ಸ್ಟೋಕ್ ಪಾರ್ಕ್ ಹೋಟೆಲ್ ಅನ್ನು ಬುಕ್ ಮಾಡಿದ್ದು, ಇದು ಈ ಅನುಮಾನ ಹುಟ್ಟಿಹಾಕಿದೆ.

ವರದಿ ಪ್ರಕಾರ, ಸೆಪ್ಟೆಂಬರ್‌ ವರೆಗೆ ಹೊಟೇಲ್‌ ಬುಕ್‌ ಆಗಿದೆ. ಮದುವೆ ನಂತ್ರದ ಕಾರ್ಯಕ್ರಮ ಅಲ್ಲಿ ನಡೆಯುವ ಸಾಧ್ಯತೆ ಇದೆ. ಪ್ರಿನ್ಸ್ ಹ್ಯಾರಿ ಮತ್ತು ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ಅನೇಕರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ ಜುಲೈ 12 ರಂದು ಮುಂಬೈನಲ್ಲಿ ನಡೆದಿದೆ. ಮದುವೆ ಪೂರ್ವ ಹಾಗೂ ಮದುವೆ ನಂತ್ರ ಅನೇಕ ಕಾರ್ಯಕ್ರಮ ನಡೆದಿದ್ದು ಅದಕ್ಕೆ ಅಂದಾಜು 500  ಮಿಲಿಯನ್ ಡಾಲರ್‌ ಖರ್ಚು ಮಾಡಲಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಬಕಿಂಗ್‌ಹ್ಯಾಮ್‌ಶೈರ್‌ನಲ್ಲಿರುವ ಸ್ಟೋಕ್ ಪಾರ್ಕ್ ಎಸ್ಟೇಟ್‌ನ ಗುತ್ತಿಗೆಯನ್ನು 2021 ಪಡೆದಿದೆ. ಎಸ್ಟೇಟ್ ಮ್ಯಾನ್ಷನ್, ಗಾಲ್ಫ್ ಕೋರ್ಸ್‌ಗಳು ಮತ್ತು ಟೆನ್ನಿಸ್ ಕೋರ್ಟ್‌ಗಳನ್ನು ಒಳಗೊಂಡಿದೆ. ಮುಖೇಶ್ ಅಂಬಾನಿ ಎರಡು ತಿಂಗಳ ಕಾಲ ಹೋಟೆಲ್ ಅನ್ನು ಪ್ರತ್ಯೇಕವಾಗಿ ಬುಕ್ ಮಾಡಿರುವ ಕಾರಣ, ಈ ಅವಧಿಯಲ್ಲಿ ಇಲ್ಲಿಗೆ ಬರದಂತೆ ಸುಮಾರು 850 ಗಾಲ್ಫ್ ಕ್ಲಬ್ ಸದಸ್ಯರಿಗೆ ಮನವಿ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read