ಶ್ರೀನಗರ: ಅಮರನಾಥ ಯಾತ್ರೆ ವೇಳೆ ದುರಂತವೊಂದು ಸಂಭವಿಸಿದ್ದು, ಬೆಂಗಳೂರು ಮೂಲದ ಯಾತ್ರಿಕರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಆರ್.ಎಸ್.ಮಂಜುನಾಥ್ (69) ಮೃತ ಯಾತ್ರಿಕರು. ಬೆಂಗಳೂರು ಮೂಲದ ಮಂಜುನಾಥ್ ಅಮರನಾಥ ಯಾತ್ರೆಗೆ ತೆರಳಿದ್ದರು. ಕಾಶ್ಮೀರದ ಗಂಡೇರ್ ಬಲ್ ಜಿಲ್ಲೆಯ ಬಲ್ವಲ್ ಬೇಸ್ ಕ್ಯಾಂಪ್ ಬಳಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಅಮರನಾಥ ಯಾತ್ರೆಗೆ ತೆರಳುತ್ತಿದ್ದ ವೇಳೆ ದಾರಿ ಮಧ್ಯೆ ಬಾಲ್ಟಾನ್ ಬೇಸ್ ಕ್ಯಾಂಪ್ ನ ವಾಹನ ಪಾರ್ಕಿಂಗ್ ಪ್ರದೇಶದ ಬಳಿ ಈ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ಮಂಜುನಾಥ್ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಬಲ್ಟಾನ್ ಬೇಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.