ಅಡುಗೆ ಮನೆಯಲ್ಲಿ ಈ ವಸ್ತು ಸದಾ ಇರುವಂತೆ ನೋಡಿಕೊಳ್ಳಿ

ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲೆಂದು ಎಲ್ಲರೂ ಬಯಸ್ತಾರೆ. ಕೆಲವರ ಮನೆಯಲ್ಲಿ ಮಾತ್ರ ಲಕ್ಷ್ಮಿ ನೆಲೆಸಿರುತ್ತಾಳೆ. ಭಕ್ತರು ಮಾಡುವ ಸಣ್ಣ ತಪ್ಪುಗಳು,ಲಕ್ಷ್ಮಿ ಮನೆಯಿಂದ ಹೊರ ಹೋಗಲು ಕಾರಣವಾಗುತ್ತದೆ. ಅಡುಗೆ ಮನೆಯಲ್ಲಿ ಮಾಡುವ ತಪ್ಪು ಕೂಡ ಒಂದು.

ಅಡುಗೆ ಮನೆಯಲ್ಲಿ ಅಕ್ಕಿ ಹಿಟ್ಟು, ಗೋಧಿ ಹಿಟ್ಟು ಸದಾ ಇರುತ್ತದೆ. ಅನೇಕರು ಪ್ರತಿ ದಿನ ಮನೆಯಲ್ಲಿ ರೊಟ್ಟಿ ಮಾಡ್ತಾರೆ. ಮತ್ತೆ ಕೆಲವರು ಅನ್ನ ಸೇವನೆ ಮಾಡ್ತಾರೆ. ನಾವು ಯಾವ ಆಹಾರವನ್ನು ಪ್ರತಿ ದಿನ ಸೇವನೆ ಮಾಡುತ್ತೇವೋ ಆ ಆಹಾರ ಸದಾ ಅಡುಗೆ ಮನೆಯಲ್ಲಿರಬೇಕು. ಕೆಲವೊಮ್ಮೆ ತಿಂಗಳ ಅಂತ್ಯದಲ್ಲಿ ಮನೆಯಲ್ಲಿ ಅಕ್ಕಿ ಅಥವಾ ಹಿಟ್ಟು ಇರುವುದಿಲ್ಲ. ಅಡುಗೆ ಮನೆಯಲ್ಲಿ ಇದು ಸದಾ ಇರುವಂತೆ ನೋಡಿಕೊಳ್ಳಬೇಕು. ಖಾಲಿಯಾದ್ರೆ ಅದು ಅಶುಭ. ಇದ್ರಿಂದ ಲಕ್ಷ್ಮಿ ಹೊರಟು ಹೋಗ್ತಾಳೆ.

ಅರಿಶಿನವನ್ನು ಕೇವಲ ಅಡುಗೆಗೆ ಮಾತ್ರ ಬಳಸುವುದಿಲ್ಲ. ಅದನ್ನು ಪೂಜೆಗಳಿಗೂ ಬಳಸಲಾಗುತ್ತದೆ. ಅರಿಶಿನ ಶುಭ ಸಂಕೇತ. ಮನೆಯಲ್ಲಿ ಸದಾ ಅರಿಶಿನವಿರಬೇಕು. ಅರಿಶಿನ ಖಾಲಿಯಾದ್ರೆ ಅದು ಗುರು ಗ್ರಹ ದೋಷಕ್ಕೆ ಕಾರಣವಾಗುತ್ತದೆ. ಅಡುಗೆ ಮನೆಯಲ್ಲಿರುವ ಅರಿಶಿನ ಖಾಲಿಯಾದ್ರೆ ಶುಭ ಕಾರ್ಯಕ್ಕೆ ಅದು ತಡೆಯೊಡ್ಡುತ್ತದೆ.

ಉಪ್ಪಿಲ್ಲದೆ ಊಟವಿಲ್ಲ. ಹಾಗೆ ಉಪ್ಪಿನ ಪಾತ್ರೆ ಖಾಲಿಯಾದ್ರೆ ಜೀವನದಲ್ಲಿ ಸುಖವಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಉಪ್ಪಿನ ಪಾತ್ರೆ ಖಾಲಿಯಾದ್ರೆ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read