ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡ್ತಿದೆ ‘ಪುಷ್ಪಾ-2’

ಬಹು ನಿರೀಕ್ಷಿತ ಚಿತ್ರ ‘ಪುಷ್ಪಾ 2: ದಿ ರೂಲ್ (ಹಿಂದಿ) 2023 ರಲ್ಲಿ ಭರ್ಜರಿ ಬಿಡುಗಡೆಗೆ ಸಜ್ಜಾಗುತ್ತಿದೆ. ಪುಷ್ಪ: ದಿ ರೈಸ್‌ನಲ್ಲಿ ಅಲ್ಲು ಅರ್ಜುನ್‌ ಅವರು ಮೋಡಿ ಮಾಡಿದ್ದರು. ಅವರ ಆಕರ್ಷಣೆಗೆ ಎಷ್ಟು ಜನ ಒಳಗಾಗಿದ್ದರೋ ಅದಕ್ಕಿಂತಲೂ ಎರಡು ಪಟ್ಟು ಪಾರ್ಟ್​-2ನಲ್ಲಿ ಹೆಚ್ಚಾಗಿದೆ ಎನ್ನಲಾಗಿದೆ.

ಟೈಗರ್ 3, ಜವಾನ್, ಸಲಾರ್ (ಹಿಂದಿ), ಕಿಸಿ ಕಾ ಭಾಯ್ ಕಿಸಿ ಕಿ ಜಾನ್, ಈ ವರ್ಷದ ಅತ್ಯಂತ ನಿರೀಕ್ಷೆ ಹೊಂದಿರುವ ಚಿತ್ರವಾಗಿದ್ದು, ಇದರಲ್ಲಿ ಪುಷ್ಪ-2 ಅಗ್ರ ಸ್ಥಾನದಲ್ಲಿ ನಿಂತಿದೆ. ಮಾಧ್ಯಮ ಪೋರ್ಟಲ್ “#OrmaxCinematix ಬಹು ನಿರೀಕ್ಷಿತ 2023 ರ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಪುಷ್ಪ ಸದ್ದು ಮಾಡುತ್ತಿದೆ.

ಪುಷ್ಪಾ 2 ಬಿಡುಗಡೆಗೂ ಮುನ್ನವೇ ಭಾರೀ ಸೌಂಡ್‌ ಮಾಡುತ್ತಿದೆ. ಕನ್ನಡ, ತೆಲುಗು ಪ್ರೇಕ್ಷಕರು ಸೇರಿದಂತೆ ಇಂಡಿಯಾ ಲೆವೆಲ್‌ನಲ್ಲಿ ಈ ಚಿತ್ರವನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಪುಷ್ಪಾ ಚಿತ್ರದ ಎರಡನೇ ಭಾಗವಾದ ʼಪುಷ್ಪ: ದಿ ರೂಲ್ʼ 2023 ವರ್ಷದ ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಚಿತ್ರದ ಹೊಸ ಶೆಡ್ಯೂಲ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಚಿತ್ರತಂಡ ಹೇಳಿದೆ.

https://twitter.com/OrmaxMedia/status/1626846512197128192?ref_src=twsrc%5Etfw%7Ctwcamp%5Etweetembed%7Ctwterm%5E1626846512197128192%7Ctwgr%5Eb156464e3266a5475c1b693b176ea42c5a19135a%7Ctwcon%5Es1_&ref_url=https%3A%2F%2Fzeenews.india.com%2Fregional%2Fallu-arjun-s-pushpa-the-rule-tops-the-list-of-most-awaited-films-in-2023-2575007.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read