ʼಪುಷ್ಪ 2ʼ ಫಸ್ಟ್ ಲುಕ್ ಯಾವಾಗ ಬಿಡುಗಡೆ ? ಇಲ್ಲಿಗೆ ಅಪ್ ಡೇಟ್ಸ್

ದಕ್ಷಿಣದ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ಪುಷ್ಪ ಸೀಕ್ವೆಲ್ ಗಾಗಿ ಸಿನಿಪ್ರಿಯರು ಕಾಯ್ತಿದ್ದಾರೆ. ಸೂಪರ್ ಡೂಪರ್ ಹಿಟ್ ಆಗಿರುವ ಪುಷ್ಪಾ ಸಿನಿಮಾದ ಭಾಗ 2ಕ್ಕೆ ಕಾತರ ಜೋರಾಗಿದೆ. ಈ ಬಗ್ಗೆ ಅಪ್ ಡೇಟ್ ಮಾಹಿತಿ ಸಿಕ್ಕಿದ್ದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದೇ ಪುಷ್ಪ 2 ಫಸ್ಟ್ ಲುಕ್ ಬಿಡುಗಡೆಯಾಗಲಿದೆ.

ಪ್ರಸ್ತುತ ತಮ್ಮ ಬೃಹತ್ ಆಕ್ಷನ್ ಚಿತ್ರ ಪುಷ್ಪ 2 ನಲ್ಲಿ ಅಲ್ಲು ಅರ್ಜುನ್ ನಿರತರಾಗಿದ್ದಾರೆ. ಪುಷ್ಪ: ದಿ ರೈಸ್‌ನ ಅದ್ಭುತ ಯಶಸ್ಸಿನ ನಂತರ ತಯಾರಕರು ಪುಷ್ಪ: ದಿ ರೂಲ್ ಎಂದು ಶೀರ್ಷಿಕೆಯನ್ನು ಘೋಷಿಸಿದರು. ವರದಿಯ ಪ್ರಕಾರ, ಏಪ್ರಿಲ್ 8 ರಂದು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದೇ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಪುಷ್ಪ 2 ಫಸ್ಟ್ ಲುಕ್ ಗಿಫ್ಟ್ ನೀಡುವು ನಿರೀಕ್ಷೆ ಇದೆ.

ಪುಷ್ಪ: ದಿ ರೈಸ್ (ಭಾಗ 1) ಡಿಸೆಂಬರ್ 17, 2021 ರಂದು ಬಿಡುಗಡೆ ಬಳಿಕ ಸೂಪರ್ ಹಿಟ್ ಆಯಿತು. ಶ್ರೀವಲ್ಲಿ, ಊ ಅಂಟಾವಾ ಹಾಡುಗಳು ಭಾರೀ ಸದ್ದು ಮಾಡಿದವು. ಪುಷ್ಪಾ ಸಿನಿಮಾ 2021 ರಲ್ಲಿ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿ ಹೊರಹೊಮ್ಮಿದೆ. ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗು ಚಲನಚಿತ್ರಗಳಲ್ಲಿ ಸ್ಥಾನ ಪಡೆದಿದೆ. ಮೊದಲ ಭಾಗವನ್ನು ನಿರ್ದೇಶಿಸಿದ್ದ ಸುಕುಮಾರ್ ಅವರೇ ಪುಷ್ಪ 2 ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read