ಮಡಿಕೇರಿ : ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ಕಲಂ( ರಡಿಯಲ್ಲಿ ನೋಂದಣಿಯಾದ ಸಂಘ ಸಂಸ್ಥೆಗಳು ಅವುಗಳ ವಾರ್ಷಿಕ ಲೆಕ್ಕಪತ್ರಗಳನ್ನು ವಾರ್ಷಿಕ ಮಹಾಸಭೆ ನಡೆದ 14 ದಿನಗಳ ಒಳಗಾಗಿ ನೋಂದಾನಾಧಿಕಾರಿ ಕಚೇರಿಗೆ ಸಲ್ಲಿಸಿ ಸ್ವೀಕೃತಿ ಪಡೆಯುವುದು ಕಡ್ಡಾಯವಾಗಿದೆ.
ಆದರೆ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು 05 ವರ್ಷಗಳಿಗೂ ಮೇಲ್ಪಿಟ್ಟು ಲೆಕ್ಕಪತ್ರಗಳನ್ನು ಫೈಲಿಂಗ್ ಮಾಡಿಕೊಳ್ಳದೇ ಇದ್ದಲ್ಲಿ ಅಂತಹ ಸಂಘ ಸಂಸ್ಥೆಗಳನ್ನು ಸದಸ್ಯರ ಹಾಗೂ ಸಂಘಗಳ ಹಿತದೃಷ್ಟಿಯಿಂದ ಮತ್ತೊಂದು ಬಾರಿ ದಂಡ ವಿಧಿಸಿ ಪೈಲಿಂಗ್ ಮಾಡಿಕೊಳ್ಳುವುದಕ್ಕೆ ಷರತ್ತುಗಳಿಗೊಳಪಟ್ಟು ಅನುಮತಿ ನೀಡಿ ಸಹಕಾರ ಸಂಘಗಳ ನಿಬಂಧಕರು ಕರ್ನಾಟಕ ರಾಜ್ಯ ಬೆಂಗಳೂರು ಅವರು ಆದೇಶ ಹೊರಡಿಸಿರುತ್ತಾರೆ.
ಷರತ್ತುಗಳು: 5 ವರ್ಷಗಳಿಗೂ ಮೇಲ್ಷಟ್ಟು ಫೈಲಿಂಗ್ ಮಾಡಿಕೊಳ್ಳದೇ ಬಾಕಿ ಇರುವ ಸಂಘ ಸಂಸ್ಥೆಗಳ ಪತ್ರಿ ವರ್ಷಕ್ಕೆ ರೂ.3 ಸಾವಿರ ಹೆಚ್ಚುವರಿ ದಂಡ ಪಾವತಿಸಿ ಫೈಲಿಂಗ್ ಮಾಡಿಕೊಳ್ಳತಕ್ಕದ್ದು. ಈ ಅವಕಾಶವು ಡಿಸೆಂಬರ್, 31 ರ ಅಂತ್ಯದವರೆಗೆ ಜಾರಿಯಲ್ಲಿದೆ. ಜಿಲ್ಲೆಯ ಎಲ್ಲಾ ಸಂಘಗಳ ಸಹಕಾರ ಸಂಘಗಳ ನಿಬಂಧಕರ ಸುತ್ತೋಲೆಯಂತೆ ಕ್ರಮಕೈಗೊಂಡು, ಸದುಪಯೋಗ ಪಡೆದು ಫೈಲಿಂಗ್ ಮಾಡದ ಸಂಘಗಳ ಫೈಲಿಂಗ್ ಮಾಡಿಕೊಳ್ಳಲು ಕೋರಲಾಗಿದೆ ಎಂದು ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ.