ಲೈಂಗಿಕ ದೌರ್ಜನ್ಯ ಆರೋಪ ; ಕೆನಡಾದ ಉದ್ಯಮಿ ‘ಫ್ರಾಂಕ್ ಸ್ಟ್ರೋನಾಚ್’ ಅರೆಸ್ಟ್..!

ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿದಂತೆ ಕೆನಡಾದ ಉದ್ಯಮಿ ಫ್ರಾಂಕ್ ಸ್ಟ್ರೋನಾಚ್ ಅವರನ್ನು ಬಂಧಿಸಲಾಗಿದೆ.

ಸ್ಟ್ರೋನಾಚ್ (91) ಅವರನ್ನು ಶುಕ್ರವಾರ (ಜೂನ್ 7) ಬಂಧಿಸಲಾಗಿದ್ದು, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಸೇರಿದಂತೆ ಐದು ಕ್ರಿಮಿನಲ್ ಅಪರಾಧಗಳ ಆರೋಪ ಹೊರಿಸಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ವರದಿಗಳು ತಿಳಿಸಿದೆ.

ಆಟೋ ಕಾಂಪೊನೆಂಟ್ ತಯಾರಕ ಮ್ಯಾಗ್ನಾ ಇಂಟರ್ನ್ಯಾಷನಲ್ ಇಂಕ್ ನ ಸ್ಥಾಪಕ ಸ್ಟ್ರೋನಾಚ್ ಅವರನ್ನು ಟೊರೊಂಟೊ ಉಪನಗರ ಅರೋರಾದಿಂದ ಬಂಧಿಸಲಾಗಿದೆ.ಪೀಲ್ ಪ್ರಾದೇಶಿಕ ಪೊಲೀಸರ ಪ್ರಕಾರ, ಲೈಂಗಿಕ ದೌರ್ಜನ್ಯಗಳು 1980 ರಿಂದ 2023 ರವರೆಗೆ ವ್ಯಾಪಿಸಿವೆ. ಸ್ಟ್ರೋನಾಚ್ ಅವರನ್ನು ನಂತರ ಷರತ್ತುಗಳ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಯಿತು ಮತ್ತು ನಂತರದ ದಿನಾಂಕದಲ್ಲಿ ಬ್ರಾಂಪ್ಟನ್ ನ ಒಂಟಾರಿಯೊ ಕೋರ್ಟ್ ಆಫ್ ಜಸ್ಟೀಸ್ ನಲ್ಲಿ ಹಾಜರಾಗಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read