ಖಬರಸ್ಥಾನ ಜಾಗದಲ್ಲಿದ್ದ ಮರ ಕಡಿದ ಆರೋಪ: ಎರಡು ಕೋಮಿನವರ ಗಲಾಟೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪ ಜಂಬರಘಟ್ಟೆ ಗ್ರಾಮದಲ್ಲಿ ಖಬರಸ್ಥಾನ ಜಾಗದಲ್ಲಿದ್ದ ಮರ ಕಡಿದ ಆರೋಪದಲ್ಲಿ ಎರಡು ಕೋಮಿನವರ ನಡುವೆ ಗಲಾಟೆ ನಡೆದಿದೆ. ಪರಸ್ಪರ ಕೈ ಮಿಲಾವಣಿಯಾಗಿದ್ದು, ಘಟನೆಯಲ್ಲಿ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಜಂಬರಘಟ್ಟೆ ಗ್ರಾಮದ ರವಿ ಎಂಬಾತ ಕುರಿ ಕಟ್ಟಲು ಗೂಟಕ್ಕಾಗಿ ಖಬರಸ್ಥಾನದ ಸಮೀಪ ಇದ್ದ ಆಕೆಷಿಯಾ ಮರದ ಕೊಂಬೆ ಕಡಿಯಲು ಮುಂದಾದಾಗ ಸಮೀಪದಲ್ಲಿದ್ದ ಅನ್ಯಕೋಮಿನ ಕೆಲವು ಯುವಕರು ತಡೆದು ಹಲ್ಲೆಗೆ ಯತ್ನಿಸಿದ್ದಾರೆ. ಆಗ ಗಲಾಟೆ ಮಾಡಿಕೊಳ್ಳುತ್ತಿದ್ದವರನ್ನು ಕೆಲವರು ಗ್ರಾಮ ಸಮಿತಿ ಬಳಿ ಕರೆದುಕೊಂಡು ಹೋಗಿದ್ದಾರೆ. ಗ್ರಾಮದ ಮುಖಂಡರು ಎರಡು ಕಡೆಯವರನ್ನು ಸಮಾಧಾನ ಮಾಡಿ ಕಳುಹಿಸಿದ್ದಾರೆ.

ರಾತ್ರಿಯಾದ ನಂತರ ಅನ್ಯಕೋಮಿನ ಯುವಕರು ರವಿ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದು, ಅಕ್ಕಪಕ್ಕದವರು ಕೂಡ ಬಂದಿದ್ದಾರೆ. ತಳ್ಳಾಟ ನೂಕಾಟ ನಡೆದು ಗಲಾಟೆಯಲ್ಲಿ ಕೆಲವರಿಗೆ ಗಾಯಗಳಾಗಿವೆ. ಬಳಿಕ ಎರಡು ಕಡೆಯವರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸುವಂತೆ ಒತ್ತಡ ಹೇರಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಗ್ರಾಮಕ್ಕೆ ಡಿವೈಎಸ್ಪಿ ಕೆ.ಆರ್. ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read