ಈ ರಾಶಿಯವರ ಯೋಜನೆಗಳೆಲ್ಲ ಆಗಲಿವೆ ಇಂದು ಯಶಸ್ವಿ

ಮೇಷ ರಾಶಿ

ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಲಿದೆ. ನಿಮ್ಮ ಯೋಜನೆಗಳೆಲ್ಲ ಯಶಸ್ವಿಯಾಗುತ್ತವೆ. ಸರ್ಕಾರದಿಂದ್ಲೂ ನೆರವು ದೊರೆಯುವ ಸಾಧ್ಯತೆ ಇದೆ.

ವೃಷಭ ರಾಶಿ

ಇವತ್ತು ನಿಮಗೆ ಮಿಶ್ರಫಲವಿದೆ. ವ್ಯಾಪಾರಿಗಳು ಹೆಚ್ಚಿನ ಹಣ ಹೂಡಿಕೆ ಮಾಡಿ ಹೊಸ ಕಾರ್ಯ ಆರಂಭಿಸಲಿದ್ದಾರೆ. ಭವಿಷ್ಯಕ್ಕಾಗಿಯೂ ಆರ್ಥಿಕ ಯೋಜನೆಗಳನ್ನು ರೂಪಿಸಬಹುದು.

ಮಿಥುನ ರಾಶಿ

ಕೋಪ ನಿಮ್ಮನ್ನು ಅಪಾಯಕ್ಕೆ ಸಿಲುಕಿಸುವ ಸಾಧ್ಯತೆ ಇದೆ. ಹಾಗಾಗಿ ಅತ್ಯಂತ ಸಮಾಧಾನ ಚಿತ್ತದಿಂದಿರಿ. ಯಾವುದೇ ವ್ಯಕ್ತಿಯಿಂದ ನಿಮಗೆ ಅವಮಾನ ಆಗದಂತೆ ಎಚ್ಚರಿಕೆ ವಹಿಸಿ.

ಕರ್ಕ ರಾಶಿ

ಇಂದು ನಿಮ್ಮ ಮನಸ್ಸು ಅತ್ಯಂತ ಸಂವೇದನಾಶೀಲವಾಗಿರುತ್ತದೆ. ಹೆಚ್ಚು ಭಾವುಕರಾಗಲಿದ್ದೀರಿ. ಮೋಜು ಮಸ್ತಿ, ಹೊಸ ಬಟ್ಟೆ, ಆಭರಣ ಹಾಗೂ ವಾಹನ ಖರೀದಿ ಯೋಗವಿದೆ.

ಸಿಂಹ ರಾಶಿ

ಇಂದು ಅತ್ಯಂತ ಉದಾಸೀನರಾಗಿರುತ್ತೀರಾ. ಕ್ರಿಯಾಶೀಲತೆಯ ಕೊರತೆ ಇರುತ್ತದೆ. ಇದರಿಂದ ಮನಸ್ಸು ಕೂಡ ಆತಂಕಗೊಳ್ಳುತ್ತದೆ. ದಿನದ ಕಾರ್ಯಗಳು ಕೂಡ ವಿಳಂಬವಾಗಲಿವೆ.

ಕನ್ಯಾ ರಾಶಿ

ಇವತ್ತು ಚಿಂತೆ ಮತ್ತು ಉದ್ವೇಗ ಹೆಚ್ಚಾಗಿರುತ್ತದೆ. ಉದರ ಬಾಧೆಯಿಂದ ಆರೋಗ್ಯ ಹದಗೆಡಬಹುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಅಡ್ಡಿ- ಆತಂಕಗಳು ಎದುರಾಗುತ್ತವೆ.

ತುಲಾ ರಾಶಿ

ಇವತ್ತು ನೀವು ಅತ್ಯಂತ ಜಾಗರೂಕರಾಗಿರಿ. ಅಧಿಕ ಆಲೋಚನೆಯಿಂದ ಮಾನಸಿಕವಾಗಿ ಹತಾಶರಾಗುತ್ತೀರಿ. ತಾಯಿ ಮತ್ತು ಸ್ತ್ರೀವರ್ಗಕ್ಕೆ ಸಂಬಂಧಿಸಿದಂತೆ ಚಿಂತೆ ಕಾಡುತ್ತದೆ.

ವೃಶ್ಚಿಕ ರಾಶಿ

ಇಂದು ನಿಮಗೆ ಲಾಭದಾಯಕ ದಿನ. ಆರ್ಥಿಕ ಲಾಭದ ಜೊತೆ ಜೊತೆಗೆ ಭಾಗ್ಯವೃದ್ಧಿಯ ಯೋಗವೂ ಇದೆ. ಅಂದುಕೊಂಡ ಕೆಲಸಗಳು ಕೈಗೂಡಲಿವೆ.

ಧನು ರಾಶಿ

ಹಿರಿಯರು ಮತ್ತು ಕುಟುಂಬಸ್ಥರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ತಪ್ಪು ತಿಳುವಳಿಕೆ ಮೂಡದಂತೆ ಎಚ್ಚರ ವಹಿಸಿ. ವ್ಯರ್ಥವಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ.

ಮಕರ ರಾಶಿ

ಇಂದು ಈಶ್ವರನ ಧ್ಯಾನ ಹಾಗೂ ಪೂಜಾ ಪಾಠ ಮಾಡಿದರೆ ಒಳಿತಾಗುತ್ತದೆ. ಮನೆಯಲ್ಲಿ ಮಂಗಳಕರ ವಾತಾವರಣ ಇರುತ್ತದೆ. ಸ್ನೇಹಿತರು, ಸಂಬಂಧಿಕರ ಭೇಟಿ ಮತ್ತು ಉಪಹಾರ ದೊರೆಯಲಿದೆ.

ಕುಂಭ ರಾಶಿ

ಹಣಕಾಸಿನ ಕೊಡು- ಕೊಳ್ಳುವಿಕೆಯಲ್ಲಿ ನಿಮಗೆ ಮೋಸವಾಗಬಹುದು. ಹಾಗಾಗಿ ಎಚ್ಚರಿಕೆಯಿಂದಿರಿ. ಏಕಾಗ್ರತೆಯ ಅಭಾವ ಉಂಟಾಗಲಿದೆ. ಇದರಿಂದ ಮಾನಸಿಕ ಸ್ವಾಸ್ಥ್ಯ ಹದಗೆಡಬಹುದು.

ಮೀನ ರಾಶಿ

ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ದೊರೆಯಲಿದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಹಿರಿಯರು ಮತ್ತು ಮಿತ್ರರಿಂದ ಸಹಕಾರ ದೊರೆಯುತ್ತದೆ. ಆದಾಯ ವೃದ್ಧಿಯಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read