ALERT : ಉದ್ಯಮಿಯ ಬೆತ್ತಲೆ ವಿಡಿಯೊ ಚಿತ್ರಿಸಿ ‘ಹನಿ ಟ್ರ್ಯಾಪ್’ : ಖತರ್ನಾಕ್ ಗ್ಯಾಂಗ್ ಅಂದರ್

ಉದ್ಯಮಿಯ ಬೆತ್ತಲೆ ವಿಡಿಯೋ, ಫೋಟೋ ಚಿತ್ರೀಕರಿಸಿಕೊಂಡು ಹನಿ ಟ್ರ್ಯಾಪ್ ಮಾಡುತ್ತಿದ್ದ ಖತರ್ ನಾಕ್ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ. ಮುಸ್ಲಿಂ ಮಹಿಳೆ ಮೋನಾ ಎಂಬಾಕೆ ತನ್ನ ಗ್ಯಾಂಗ್ ಜೊತೆ ಸೇರಿಕೊಂಡು ಉದ್ಯಮಿಯನ್ನು ತನ್ನತ್ತ ಸೆಳೆದು ಆತನ ಬೆತ್ತಲೆ ವಿಡಿಯೋಗಳನ್ನು ಸೆರೆಹಿಡಿದು ಹಣ ವಸೂಲಿ ಮಾಡಿದ್ದಾರೆ.

ಕೇರಳ ಮೂಲದ ಉದ್ಯಮಿ ಸುನ್ನಿ ಎಂಬುವವರು ಚೆನ್ನೈನಿಂದ ಮೈಸೂರು ಮಾರ್ಗವಾಗಿ ಕೇರಳಕ್ಕೆ ಹೋಗುತ್ತಿದ್ದ ವೇಳೆ ಮಾನಂದವಾಡಿಯಲ್ಲಿ ಈ ಗ್ಯಾಂಗ್ ಉದ್ಯಮಿಯ ಗಮನ ಸೆಳೆದಿದೆ.

ಇವರ ಮಾತಿಗೆ ಮರುಳಾದ ಉದ್ಯಮಿ ಸುನ್ನಿ ಅವರು ಹೇಳಿದಂತೆ ಮನೆಯೊಂದಕ್ಕೆ ಹೋಗಿದ್ದಾರೆ. ನಂತರ ಮಹಿಳೆ ಉದ್ಯಮಿ ಸುನ್ನಾ ಜೊತೆ ಬೆತ್ತಲಾಗಿ ಮಲಗಿದ್ದಾಳೆ. ನಂತರ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲೆ ಮಾಡಿದ ಗ್ಯಾಂಗ್ 10 ಲಕ್ಷರೂಗೆ ಬೇಡಿಕೆ ಇಟ್ಟಿದ್ದಾರೆ. ಏನೂ ಮಾಡದ ಸ್ಥಿತಿಯಲ್ಲಿ ಸುನ್ನಿ 5 ಲಕ್ಷ ಹಾಗೂ ಉಂಗುರ ಕೊಟ್ಟಿದ್ದಾರೆ. ಹಣ ಪಡೆದ ಗ್ಯಾಂಗ್ ಅಲ್ಲಿಂದ ಪರಾರಿಯಾಗಿದೆ.

ನಂತರ ಸುನ್ನಿ ಅವರು ತಿರುನೆಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಂತರ ಪೊಲೀಸರು ಪ್ರಕರಣವನ್ನು ಮೈಸೂರು ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಿದ್ದಾರೆ . ಕೂಡಲೇ ಅಲರ್ಟ್ ಆದ ಪೊಲೀಸರು ಕಾರ್ಯಾಚರಣೆ ನಡೆಸಿ ಮುಸ್ಲಿಂ ಮಹಿಳೆ ಮೋನಾ, ಫಜಲುಲ್ಲಾ ರೆಹಮಾನ್, ರಿಜ್ವಾನ್ ಸೇರಿದಂತೆ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read