ALERT : ಬಾಡಿಗೆ ಫ್ಲಾಟ್, ಲಾಡ್ಜ್ ಗೆ ಹೋಗುವ ಯುವತಿಯರೇ ಎಚ್ಚರ..! ತಪ್ಪದೇ ಈ ಸುದ್ದಿ ಓದಿ

ನವದೆಹಲಿ : ಯುವತಿಯೊಬ್ಬಳು ತನ್ನ ಬಾಡಿಗೆ ಅಪಾರ್ಟ್ಮೆಂಟ್ ನಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿದ್ದನ್ನು ನೋಡಿ ಬೆಚ್ಚಿ ಬಿದ್ದಿದ್ದಾಳೆ.ಆಘಾತಕಾರಿ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.

ಅಪಾರ್ಟ್ಮೆಂಟ್ನಲ್ಲಿ ಹಿಡನ್ ಕ್ಯಾಮೆರಾಗಳನ್ನು ಅಕ್ರಮವಾಗಿ ಅಳವಡಿಸಿದ್ದಕ್ಕಾಗಿ ಅಪಾರ್ಟ್ಮೆಂಟ್ ಮಾಲೀಕರ ಮಗನಾದ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಕರಣ್ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಆರೋಪಿಗಳು ಮೂರು ತಿಂಗಳ ಹಿಂದೆ ಮಹಿಳೆಯ ಮಲಗುವ ಕೋಣೆ ಮತ್ತು ಸ್ನಾನಗೃಹದಲ್ಲಿ ಗುಪ್ತ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಪೂರ್ವ ದೆಹಲಿಯ ಶಕರ್ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಸಂತ್ರಸ್ತೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಶಕರ್ಪುರದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು.ತನ್ನ ವಾಟ್ಸಾಪ್ ಖಾತೆಯು ಅಪರಿಚಿತ ಲ್ಯಾಪ್ಟಾಪ್ಗೆ ಲಾಗ್ ಇನ್ ಆಗಿರುವುದನ್ನು ಅವಳು ಕಂಡುಕೊಂಡಳು. ನಂತರ ಅವಳು ತನ್ನ ಅಪಾರ್ಟ್ಮೆಂಟ್ ಅನ್ನು ಜಾಲಾಡಿದ್ದಾಳೆ. ಮತ್ತು ಸ್ನಾನಗೃಹದ ಬಲ್ಬ್ ಹೋಲ್ಡರ್ನಲ್ಲಿ ಹಿಡನ್ ಕ್ಯಾಮೆರಾವನ್ನು ಫಿಕ್ಸ್ ಮಾಡಿರುವುದನ್ನು ನೋಡಿ ಬೆಚ್ಚಿ ಬಿದ್ದಿದ್ದಾಳೆ. ಬಾಡಿಗೆ ಫ್ಲ್ಯಾಟ್, ಲಾಡ್ಜ್ ಗೆ ಹೋಗುವ ಮುನ್ನ ಯುವತಿಯರು ಎಚ್ಚರ ವಹಿಸಬೇಕು..!

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read