ಅಕ್ಷಯ್​ ಕುಮಾರ್​ ಕುರಿತು ಸ್ಫೋಟಕ ಮಾಹಿತಿ ಬಿಚ್ಚಿಟ್ಟ​ ನಟಿ ಶಾಂತಿಪ್ರಿಯಾ…!

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಸಿನಿಮಾದ ಮೊದಲ ನಾಯಕಿ ಶಾಂತಿ ಪ್ರಿಯಾ ನಿಮಗೆ ನೆನಪಿದ್ದಿರಬಹುದು. ಇಬ್ಬರೂ 1991ರಲ್ಲಿ ತೆರೆ ಕಂಡ ʼಸೌಗಂಧ್​ʼ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಇದೀಗ ಶಾಂತಿ ಪ್ರಿಯಾ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

ಅಕ್ಷಯ್​ ಕುಮಾರ್​​ ಮದುವೆಯಾದ ಬಳಿಕ ನೀನು ನಾಯಕಿ ನಟಿ ಆಗುವಂತಿಲ್ಲ ಎಂದು ತಮಗೆ ಹೇಳಿದ್ದರು ಎಂದು ಹೇಳಿದ್ದಾರೆ. ಅಂದಹಾಗೆ ಶಾಂತಿ ಪ್ರಿಯಾ ಒಟ್ಟು 30 ಸಿನಿಮಾಗಳಲ್ಲಿ ನಟಿಸಿದ್ದು ಮದುವೆಯಾದ ಬಳಿಕ ತಮ್ಮ ಕುಟುಂಬದ ಜೊತೆ ಕಾಲ ಕಳೆಯಲು ನಿರ್ಧರಿಸಿದ್ದರು.

ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಶಾಂತಿ ಪ್ರಿಯಾ, ನಾನು ಅಕ್ಷಯ್​ ಕುಮಾರ್​ ಬಳಿ ಕೆಲಸ ಕೇಳಿದ್ದೆ. ಆದರೆ ಅಕ್ಷಯ್​ ನನಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನನಗೆ ಅಕ್ಷಯ್​ ಕುಮಾರ್​ರ ಈ ನಡೆ ನಿಜಕ್ಕೂ ದುಃಖ ತಂದಿತ್ತು ಎಂದು ಹೇಳಿದ್ದಾರೆ.

ಒಂದು ದಿನ ನಾನು ಅಕ್ಷಯ್​ ಕುಮಾರ್​ರನ್ನು ಭೇಟಿಯಾಗಿ ನನಗೆ ನಟಿಸುವ ಆಸಕ್ತಿ ಇದೆ ಎಂದು ಹೇಳಿದ್ದೆ. ಇದಕ್ಕೆ ವಿಚಿತ್ರವಾದ ಪ್ರತಿಕ್ರಿಯೆಯನ್ನು ನಟ ಅಕ್ಷಯ್​ ನೀಡಿದ್ದರು. ನೀನು ನಾಯಕಿಯಾಗಿ ನಟಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರಂತೆ.

ಹಾಲಿಡೇ ಸಿನಿಮಾ ಸೆಟ್​ನಲ್ಲಿ ನಾನು ಅಕ್ಷಯ್​ರನ್ನು ಭೇಟಿ ಮಾಡಿದ್ದೆ. ಈ ವೇಳೆ ನಾನು ಚಿತ್ರರಂಗಕ್ಕೆ ಕಮ್​ಬ್ಯಾಕ್​ ಮಾಡಲು ಇಚ್ಛಿಸುತ್ತೇನೆ ಎಂದೂ ಸಹ ಹೇಳಿಕೊಂಡಿದ್ದೆ. ಆಗ ಅಕ್ಷಯ್​ ನಾನು ಹೇಗಿದ್ದೇನೆ, ನನ್ನ ಮಕ್ಕಳು ಹೇಗಿದ್ದಾರೆ ಎಂದೆಲ್ಲ ಪ್ರಶ್ನಿಸಿದರು. ಅಲ್ಲದೇ ಸೋನಾಕ್ಷಿಗೆ ನನ್ನ ಪರಿಚಯ ಕೂಡ ಮಾಡಿಕೊಟ್ಟರು. ನೀನು ಮೊದಲಿನಂತೆಯೇ ಕಾಣುತ್ತೀಯಾ. ಆದರೂ ನೀನು ನಾಯಕಿಯಾಗಿ ನಟಿಸಲು ಸಾಧ್ಯವಿಲ್ಲ ಎಂದು ಅಕ್ಷಯ್​ ಹೇಳಿದ್ದರು ಎಂದು ಶಾಂತಿ ಪ್ರಿಯಾ ಹೇಳಿದ್ದಾರೆ.

ಮದುವೆಯಾದ ಬಳಿಕ ಇಂಡಸ್ಟ್ರಿ ಮಹಿಳೆಯರನ್ನು ಸರಿಯಾಗಿ ನಡೆಸಿಕೊಳ್ಳೋದಿಲ್ಲ ಎಂದು ಅಕ್ಷಯ್​ ಕುಮಾರ್​ ಹೇಳಿದ್ದರು. ನೀನೇಕೆ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಬಾರದು ಎಂದು ಅಕ್ಷಯ್​ ಕೇಳಿದ್ದರಂತೆ. ಇದಕ್ಕೆ ಶಾಂತಿ ನನ್ನ ಮಕ್ಕಳು ಮುಂಬೈನಲ್ಲಿ ಇರೋದ್ರಿಂದ ನನಗೆ ಅಲ್ಲಿ ಹೋಗಲು ಸಾಧ್ಯವಿಲ್ಲ ಎಂದಿದ್ದರಂತೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read