ದೇಶದ ಮೊದಲ ಪರಿಸರ ಸ್ನೇಹಿ ಬೋಯಿಂಗ್‌; 20 ನೇ ವಿಮಾನವನ್ನು ಪರಿಚಯಿಸಿದ ಆಕಾಸ ಏರ್‌ಲೈನ್‌

ಬೆಂಗಳೂರು: ಕಡಿಮೆ ಹೊಗೆ ಹೊರಸೂಸುವ, ದೇಶದಲ್ಲೇ ಮೊದಲ ಪರಿಸರ ಸ್ನೇಹಿ ಬೋಯಿಂಗ್‌ ಹೊಂದಿರುವ 20ನೇ ವಿಮಾನವನ್ನು ಆಕಾಸ ಏರ್‌ಲೈನ್‌ ಇಂದು ಪರಿಚಯಿಸಿದೆ.

ಪರಿಸರ ಸ್ನೇಹಿ ಬೋಯಿಂಗ್ ಆದ 737 MAX , 737-8-200 ವಿಮಾನವು ಇಂದು ಬೆಳಗ್ಗೆ 9.31ಕ್ಕೆ ಬೆಂಗಳೂರಿಗೆ ಆಗಮಿಸಿದೆ. ಯುಎಸ್‌ಎನ್ ಸಿಯಾಟಲ್‌ ನಿಂದ ಹೊರಟ ಈ ವಿಮಾನಯಾನ ಇಂದು ಬೆಂಗಳೂರಿಗೆ ಬಂದು ತಲುಪಿದೆ.

ಕಳೆದ ವರ್ಷ ತನ್ನ ವಿಮಾನ ಸೇವೆ ಆರಂಭಿಸಿದ ಆಕಾಸ ಏರ್ ಲೈನ್ ಒಂದು ವರ್ಷದೊಳಗೆ 20 ವಿಮಾನಗಳನ್ನು ವಿವಿಧ ಮಾರ್ಗಗಳಿಗೆ ಪರಿಚಯಿಸಿದೆ. ಇದೀಗ ತನ್ನ 20ನೇ ವಿಮಾನವನ್ನು ಪರಿಚಯಿಸಿರುವ ಆಕಾಸ ವಿಮಾನ ಸಂಸ್ಥೆ ಈಗ ವಿಮಾನನೌಕಾಪಡೆಗೂ ಸೇರ್ಪಡೆಗೊಂಡಿದೆ.

ಈ ಬಗ್ಗೆ ಮಾತನಾಡಿದ ಆಕಾಸ ಏರ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್ ದುಬೆ, ಆಕಾಸ ವಿಮಾನಯಾನ ಪ್ರಾರಂಭಗೊಂಡ ಒಂದೇ ವರ್ಷದಲ್ಲಿ ತನ್ನ ವಿಮಾನಗಳ ಸಂಖ್ಯೆಯನ್ನು 20ಕ್ಕೆ ಹೆಚ್ಚಿಸಿಕೊಂಡಿರುವುದು ಹೆಮ್ಮೆಯ ವಿಚಾರ. ಮೊದಲ ಬಾರಿಗೆ ಬೋಯಿಂಗ್‌ 737 MAX ವಿಮಾನ ಪಡೆದ ಸಂಸ್ಥೆ ಕೂಡ ನಮ್ಮದಾಗಿದೆ. ಈ ಬೋಯಿಂಗ್‌ನ ವಿಶೇಷತೆ ಎಂದರೆ, ಇದು ಸಾಮಾನ್ಯ ಎಂಜಿನ್‌ಗಿಂತ ಶೇ.20ರಷ್ಟು ಕಡಿಮೆ ಇಂಧನ ಉಗುಳಲಿದ್ದು, ಹೆಚ್ಚು ಪರಿಸರ ಸ್ನೇಹಿ ವಿಮಾನವಾಗಲಿದೆ. ಇಂಧನ ದಕ್ಷತೆಯನ್ನು ಸಹ ಇದು ಕಾಪಾಡಿಕೊಳ್ಳಲು ಹೆಚ್ಚು ಸಹಕಾರಿಯಾಗಿದೆ. ಈ ಬೋಯಿಂಗ್‌ನಿಂದ ಗ್ರಾಹಕರಿಗೆ ಆರಾಮದಾಯಕ ಪ್ರಯಾಣ ದೊರೆಯಲಿದೆ. ಇದಷ್ಟೇ ಅಲ್ಲದೆ, ಬೇರೆ ವಿಮಾನಗಳಂತೆ ಇದು ಹೆಚ್ಚು ಶಬ್ಧ ಮಾಡುವುದಿಲ್ಲ. ಶೇ.50ರಷ್ಟು ಕಡಿಮೆ ಶಬ್ಧ ಮಾಡಲಿದ್ದು, ಶಬ್ಧ ಮಾಲಿನ್ಯವನ್ನು ತಡೆಯಲಿದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read